ಕಾಲಿಲ್ಲದ ಮುದುಕನನ್ನು ತೆರವುಗೊಳಿಸಲಾಗಿದೆ…

ಎಂ ಜಿ ಹೆಕ್ಟರ್ ಮತ್ತು ಇಲಿಯೋಟ

ಡಾ. ಗೋವಿಂದ ಹೆಗಡೆ

ಎಂ ಜಿ ರಸ್ತೆಯಲ್ಲಿ ಥಳಥಳಿಸುವ

ಎಂ ಜಿ ಹೆಕ್ಟರ್ ಸಾಗಿದರೆ

ಅರ್ಥ- ನಾಡು ಸಮೃದ್ಧವೆಂದಲ್ಲ

ಸಂತ್ರಸ್ತರನ್ನು ಮರೆತೆವೆಂದಷ್ಟೇ

ನಗರದ ಬೀದಿಗಳಲ್ಲಿ ಆಡಿ

ವೋಲ್ವೋ, ಬೆಂಝ್, ಬಿಎಂಡಬ್ಲ್ಯೂ

ಭರ್ರನೆ ಓಡಿದರೆ ರಸ್ತೆ

ಲಕಲಕಿಸಿದೆ ಎಂದಲ್ಲ

ಕೆಟ್ಟ ದಾರಿಗಳಿಗೆ ನಾವು

ಒಗ್ಗಿದ್ದೇವೆ ಅಂತ ಮಾತ್ರ

ಹ್ಞಾ, ಆ ಪ್ರತಿಷ್ಠಿತ ಮಾರ್ಗದ

ಮೂಲೆಯಲ್ಲಿ ಕೂರುತ್ತಿದ್ದ

ಕಾಲಿಲ್ಲದ ಮುದುಕನನ್ನು

ತೆರವುಗೊಳಿಸಲಾಗಿದೆ

ನಾಳೆ ಬರಲಿರುವ ಅತಿ

ಗಣ್ಯವ್ಯಕ್ತಿಗಳ ತಂಪು

ಕನ್ನಡಕದ ಹಿಂದೆ ಕಿಸುರಾಗದಂತೆ

ಅವನದೇ ಹೆಸರಿನ ವೃತ್ತದಲ್ಲಿ

ಕೂತೇ ಇದ್ದಾನೆ ಅರೆಬೆತ್ತಲೆ

ಫಕೀರ ತನ್ನ ಮಂಗಗಳ ಜೊತೆ

ಕಿವಿ ಕಣ್ಣು ಬಾಯಿ ಮುಚ್ಚಿವೆ

ಮೂಗು ಮುಚ್ಚಬೇಕಾಗಿಲ್ಲ

ದುರ್ವಾಸನೆ ಅಭ್ಯಾಸವಾಗಿದೆ

ವರ್ಷಕ್ಕೆರಡು ದಿನ ಮಣಿಯುತ್ತೇವೆ

ಹಾರ ಹಾಕಿ ಚಿತ್ರ ತೆಗೆದು

ಒಣ ದಿನವನ್ನೂ ಆಚರಿಸುತ್ತೇವೆ

ಫ್ರಿಜ್ ನಲ್ಲಿ ತುಂಬಿರುವ ಮಾಲಿನ

ನೆನಪಿನಲ್ಲಿ

ಯಾವುದೆಲ್ಲಕ್ಕೆ ಕಣ್ಣು ಹೂಡಬಲ್ಲೆವು

ನಾವು-

ಝಗಮಗದ ನಿಯಾನ್ ದೀಪಗಳಿಗೆ

ಬಾರು ಪಬ್ಬುಗಳ ಮಬ್ಬುಬೆಳಕಿಗೆ

ಕತ್ತಲ ವ್ಯವಹಾರಗಳಿಗೆ

ವೃತ್ತವನ್ನು ಬಳಸುವಾಗ ಮಾತ್ರ

ಫಕೀರನ ಮತ್ತು ಮಂಗಗಳತ್ತ

ಕಣ್ಣು ಹಾಯಿಸದೇ

ತಿರುವು ಬಳಸಿ ವೇಗ ಹೆಚ್ಚಿಸುತ್ತೇವೆ

ಇಲಿಯೋಟದ ಪಂದ್ಯದಲ್ಲಿ

ಹಿಂದುಳಿಯದಂತೆ

‍ಲೇಖಕರು avadhi

October 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: