ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುವರ್ಣ ಹೊಸ ಕವಿತೆ- ಬಿಸಿಲ ಝಳ…

ಸಿ ಸುವರ್ಣ ಕೆ ಟಿ ಶಿವಪ್ರಸಾದ್

ದಿಗಿ ದಿಗಿ ಬೇಸಿಗೆ ಬಿಸಿಲ ಝಳ
ಗಂಟಲು ಒಣಗಿದೆ ದಹಾ
ನಿಲ್ಲಲೂ ಎಲ್ಲೂ ತಾಣವಿಲ್ಲ
ತಲೆನೆತ್ತಿ ಕಾದ ಬಾಣಲಿ

ಮರಗಳೆಲ್ಲಾ ಮಂಗ ಮಾಯಾ
ಧಣಿವಿಂಗಿಸಿಕೊಳ್ಳಲು ಎಲ್ಲೂ
ನೆರಳಿಲ್ಲ ಎತ್ತ ಕಣ್ಣು ಹಾಯಿಸಿದರೂ
ಬಟಾಬಯಲು

ದೂರದಲ್ಲಿ ನೀಲಿ ಬಾವುಟಗಳು
ಹಾರುತಿದೆ ಅಲ್ಲೆಲ್ಲ ಜೀವಂತ
ಅಸ್ಥಿಪಂಜರಗಳ ಗುಳೆಬಿದ್ದ ಕಣ್ಣಲ್ಲಿ
ಮೈ ಮುಚ್ಚದ ನಜ್ಜುಗುಜ್ಜು ದೇಹಗಳ ಚಿಂದಿ ತೊಟ್ಟ ಜನ…

ಹಸಿವ ಹಿಂಗಿಸಿಕೊಳ್ಳಲು ಮುರುಕು
ಗುಡಿಸಲಿನಲಿಟ್ಟ ಎರಡು ಪಾತ್ರೆ
ಹಿಡಿದು ದಂಡು ದಂಡಾಗಿ ಇರುವೆ
ಸಾಲಿನಂತೆ ಸಾಲು ಸಾಲು

ಅನ್ನಛತ್ರದಲ್ಲಿ ನೆರೆದ ಹಸಿದ ಜನರ
ಗುಂಪಿನ ಲ್ಲಿ ಕಪ್ಪು ಜನರ ಮೌನ
ಮೆರವಣಿಗೆ ಕಂಡು ಮೂಕವಿಸ್ಮಿತರಾಗಿ ವೀಕ್ಷಿಸುತಾ
ಕುಳಿತ ಅದೇಷ್ಟೋ ಆತ್ಮಗಳು

ಒಳಬೇಗುದಿ ಬಿಸಿಲ ಝಳಕ್ಕೆ
ಕೊತಕೊತ ಕುದಿಯುತಿದೆ
ಸಂಕಟ ಹೃದಯ ಚೀರುತಿದೆ
ಎಂದು ಈ ಕಪ್ಪು ಜನ ನಿರಾಳವಾಗುವರು

‍ಲೇಖಕರು avadhi

12 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading