ಪಿ ನಂದಕುಮಾರ್
ತೆಂಗಿನ ಮರದಡಿ
ಹಂಗಿನ ಮರ ಹುಟ್ಟಿ
ಹೆಂಗೆಂಗ ಹಾಡೆsತಿ
ಚಂದದ ಹೊನ್ನಕ್ಕ
ನಂಜಿನ ಕಾಯಿ
ಸಂಜೀಕಿ ಆಕ್ಕತಿ
ತಂಬಿಗಿ ತುಂಬಿ
ಕೊಲ್ಲೆಕ ನಂಬಿ
ಜಾತಕ ಕೇಳೆsತಿ

ರಂಗಿನ ಆಟಕ
ಗುಂಗಿನ ಹುಳ ಬಂದು
ಸುಳಿಯ ಕೆಡಸssತಿ
ರಂಗದ ಮ್ಯಾಲಿನ
ರಾತ್ರಿಯ ಊಟಕ
ಮಂಗಕ ಕರದೆsತಿ
ಪಾಪದ ಮಂದಿಗಿ
ಸೂತಕ ಶಾಸ್ತ್ರವ ಹೇಳಿ
ಲೋಕಕ ಬೆನ್ನ ಮಾಡೆsತಿ






ಜಾನಪದ ಶೈಲಿಯ ಕವನ ಚೆನ್ನಾಗಿದೆ.