ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರೇಶ ತಂಗೋಡಗೆ ಕಣವಿ ಕಾವ್ಯ ಪುರಸ್ಕಾರ..

ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ ಇವರು ನಾಡೋಜ ಡಾ ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿಯವರ ದತ್ತಿ ಅಂಗವಾಗಿ ಪ್ರತಿ ವರ್ಷವೂ ಆಯೋಜಿಸುವ ರಾಜ್ಯ ಮಟ್ಟದ ಕಾವ್ಯ ಸ್ಪರ್ಧೆಯಲ್ಲಿ 2026ನೇ ಸಾಲಿನ ಕಾವ್ಯ ಪುರಸ್ಕಾರ ಸುರೇಶ ತಂಗೋಡ ಬರೆದಿರುವ “ಅವನಲ್ಲ ಅವಳು” ಕಾವ್ಯಕ್ಕೆ ಲಭಿಸಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುತ ಕಾವ್ಯನಾಮದ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಸುರೇಶ ತಂಗೋಡ ಅವರು ಕಾಂಕ್ರೀಟ್ ಕಾಡು, ಅಂಗೈಯಲ್ಲಿ ಅಂಚೆ ಎಂಬ ಕೃತಿಗಳನ್ನು ನಾಡಿನ  ಸಾರಸ್ವತ ಲೋಕಕ್ಕೆ ಅರ್ಪಿಸಿದ್ದು ಅವರ ತಮ್ಮದೇ ಓದುಗ ಬಳಗವನ್ನು ಹೊಂದಿದ್ದಾರೆ.

ಅವರಿಂದ ಇನ್ನೂ ಅನೇಕ ಕೃತಿಗಳು ಹೊರಹೊಮ್ಮಲಿ, ನಾಡಿನಾದ್ಯಂತ ಅವರ ಹೆಸರು ಚಿರಪರಿಚಿತವಾಗಲೆಂದು ಅವರ ಓದುಗ ವರ್ಗ ಮತ್ತು ಪತ್ರಿಕಾ ಬಾಂಧವರು ಅಭಿನಂದಿಸಿದ್ದಾರೆ.

‍ಲೇಖಕರು Admin

23 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading