ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುರಿಯುವ ಮಳೆಗಾಗಿ..

ಅರ್ಥಮಾಡಿಕೊಳ್ಳುವೆಯಾದರೆ!

ku sa madhusoodan naayar

ಕು.ಸ.ಮಧುಸೂದನ ನಾಯರ್, ರಂಗೇನಹಳ್ಳಿ

 

seaಅಂತಹದೊಂದು ಉತ್ಕಟ ಪ್ರೇಮವ
ನೀನರ್ಥಮಾಡಿಕೊಳ್ಳುವೆಯಾದರೆ ಕಡು ಬೇಸಿಗೆಯಲೂ
ಸುರಿಯುವ ಮಳೆಗಾಗಿ
ಕಾದುಕೂತ ಧಾರಿಣಿಯ,
ಗಡಗಡಿಸುವ ಚಳಿಯ ಛಳುಕಿಗೂ
ಅಗ್ಗಿಷ್ಠಿಕೆಯಾಗಿ ಬರುವ ಮದ್ಯಾಹ್ನದ ಸೂರ್ಯನ
ನೀನು ನಿರಾಕರಿಸಲಾರೆ.
ಯಾವ ಪ್ರೇಮವೂ ದೈವೀಕವೆಂಬ ಹುಸಿಯ
ಮಾತಾಡದೆ
ಯಾವ ಕಾಮವೂ ಲೌಕಿಕದ ಮಾಯೆಯೆಂಬ ತಿರಸ್ಕಾರದ
ಮಾತಾಡದೆ
ಅದೊಂದು ಪ್ರೇಮವನೊಪ್ಪಿಕೊಳ್ಳುವಿಯಾದರೆ
ಶತಮಾನಗಳ ಶಾಪಗ್ರಸ್ತ ಜೀವವೊಂದು ಬಿಡುಗಡೆಯಾಗಿ
ಪಾಪದ ಕೂಪದೊಳು ಮಿಂದೆದ್ದ ಮನಸೊಂದು ಸ್ಪಟಿಕದಂತೆ ಶುಭ್ರವಾಗಿ
ಬಿಡುವೆ
ನಿನ್ನಿಂದ
ಮತ್ತು
ನಿನ್ನಿಂದ
ಮತ್ತು
ನಿನಗಾಗಿ ಮಾತ್ರ
ನಿಶ್ಚಿತ

‍ಲೇಖಕರು Admin

25 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading