‘ಸುರಮ್ಯ ಎಕ್ಕುಂಡಿ’ ಫೋಟೋ ಆಲ್ಬಂ…

ಸು ರಂ ಎಕ್ಕುಂಡಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ನೆನಪು, ಮಾತು, ಕವಿತೆಗಳ ವಾಚನ ಹಾಗೂ ಗಾಯನ ಕಾರ್ಯಕ್ರಮವನ್ನು ಭಾಗವತರು ಹಾಗೂ ಸು ರಂ ಎಕ್ಕುಂಡಿ ಅವರ ಕುಟುಂಬ ಸಹಯೋಗದಲ್ಲಿ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸು ರಂ ಎಕ್ಕುಂಡಿಯವರ ಕಾವ್ಯಗಳ ಓದು, ಗೀತೆಗಳ ಗಾಯನ, ಅವರ ಬಗೆಗೆ ಒಂದಿಷ್ಟು ಮಾತು-ನೆನಪು, ಕೆಲವರಿಗೆ ಸಮ್ಮಾನ-ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕವಿ ಜಯಂತ ಕಾಯ್ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ‘ಬಹುರೂಪಿ’ ಪ್ರಕಟಣೆಯ ‘ನನ್ನ ಬಕುಲದ ಹೂವು’ ಪುಸ್ತಕವನ್ನು ಹಿರಿಯ ಲೇಖಕಿ ಡಾ ವಿಜಯಾ ಬಿಡುಗಡೆ ಮಾಡಿದರು.

ಕವಿ ಡಾ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಜಿ ಎನ್‌ ಮೋಹನ್‌ ಮುಖ್ಯ ಅತಿಥಿಗಳಾಗಿದ್ದರು.

ನೀನಾಸಂ ಪ್ರತಿಷ್ಠಾನ, ಸಂಚಿ ಫೌಂಡೇಷನ್‌ ನವರಿಂದ ಎಕ್ಕುಂಡಿಯವರ ಕವಿತೆ ಮಿಥಿಲೆಯ ಗೀತ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಖ್ಯಾತ ಅಂಕಣಕಾರರಾದ ಶೂದ್ರ ಶ್ರೀನಿವಾಸ್‌, ಸಾಹಿತ್ಯ ಚಿಂತಕರಾದ ಡಿ.ವಿ. ಪ್ರಹ್ಲಾದ್‌, ಸಾಹಿತಿ ಲತಾ ಗುತ್ತಿ, ಮಧುಕರ ಎಕ್ಕುಂಡಿ ಅವರು ಎಕ್ಕುಂಡಿ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.

ಎಕ್ಕುಂಡಿ ಕವಿತೆಗಳ ವಾಚನ ಕಾರ್ಯಕ್ರಮವನ್ನು ಖ್ಯಾತ ವಿಮರ್ಶಕರಾದ ಎಸ್‌ ದಿವಾಕರ್‌, ಡಿಡಿ ಚಂದನ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಎಚ್‌ ಎನ್‌ ಆರತಿ, ಖ್ಯಾತ ನಟಿ ಜಯಲಕ್ಷ್ಮಿ ಪಾಟೀಲ್‌, ಕವಯತ್ರಿ ರಂಜನಿ ಪ್ರಭು ನಡೆಸಿಕೊಟ್ಟರು.

ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್‌ ಅವರು ಇಡೀ ದಿನದ ಕಾರ್ಯಕ್ರಮದ ಸಮಾರೋಪವನ್ನು ಮಾಡಿದರು.

ಅನ್ವೇ಼ಷಣೆಯ ಸಂಪಾದಕರಾದ ಆರ್‌ ಜಿ ಹಳ್ಳಿ ನಾಗರಾಜ್, ಭಾರತಿ ಎಕ್ಕುಂಡಿ, ನಾರಾಯಣ ನವರತ್ನ ಭಾಗವಹಿಸಿದ್ದರು.

ಸಂಗೀತಗಾರ ಡಾ. ವಿದ್ಯಾಭೂಷಣ ಎಕ್ಕುಂಡಿಯವರ ಗೀತೆಗಳನ್ನು ಹಾಡಿದರು. ವಿದ್ವಾನ್‌ ಡಾ. ಪ್ರಭಂಜನಾಚಾರ್ಯರು ಉಪಸ್ಥಿತರಿದ್ದರು.

‍ಲೇಖಕರು Admin

December 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: