ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮ್ಮನೇ ಇಳಿದುಬಿಡೋಣ..

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ

ಮೆಚ್ಚುಗೆ ಪಡೆದ ಕವಿತೆ

ದೀಪ ಹಚ್ಚೋಣ ಬಾ

ramya-k-g-murnad

ರಮ್ಯ ಕೆ.ಜಿ.ಮೂರ್ನಾಡು

ಮಣ್ಣ ಹಣತೆಯ ಕಣ್ಗಳೊಳಗೆ

ಸುಮ್ಮನೇ ಇಳಿದುಬಿಡೋಣ…

ಒಡಲ ಕುಲುಮೆಯೊಳಗೆ ಬೇಯುವ

ಕಣಗಳು ಶೃತಿಗೊಳ್ಳಲಿ….

ಮನ್ವಂತರದ ಒಸಗೆಗಿಂದು

ದೀಪ ಹಚ್ಚೋಣ ಬಾ…

Eega Sampoorna-Lamp

ಹೊಸತು ತಿರಿಯೊಂದು

ಸಿದ್ಧವಿರಲಿ…

ಬರಿದೇ ಹೊಗೆಯುಗುಳುವ

ಬತ್ತಿಗಳೆಲ್ಲಾ ಉರಿದು ಕರಕಲಾಗಲಿ…

ಬಡ ಕೂಸುಗಳ ಕಣ್ಗಳೊಳಗೆ

ಕಾಡಿಗೆಯಿಷ್ಟು ನಗು ಚೆಲ್ಲಲಿ…

ದೀಪ ಹಚ್ಚೋಣ ಬಾ…

 

ಕಲಬೆರಕೆಯ ನಂಜುಗಳನ್ನೆಲ್ಲಾ

ಗಾಣದೊಳಗೇ ಬಸಿದು

ತೈಲವೆರೆವ ಹೂ ಮನಸುಗಳಿವೆ…

ಕೈ ಯಾರದ್ದಾದರೇನು…?

ಕನಸಿನ ಬೆಳಕು ನಗುತ್ತಿರಬೇಕು

ದೀಪ ಹಚ್ಚೋಣ ಬಾ…

 

ಬುಡದ ಕತ್ತಲೆಗೂ ಸ್ವಾಭಿಮಾನವಿದೆ…

ಮುಬ್ಬು ಮಂಪರಿನಲಿ ಮಲಗಿಕೊಂಡ

ಇತಿಹಾಸವಿದು ಎಚ್ಚರಗೊಂಡು

ಸತ್ಯ-ಮಿಥ್ಯ ಪ್ರತಿಬಿಂಬಗಳೂ

ಪರಿಚಿತಗೊಳ್ಳಲಿ…

ದಿಟ್ಟತೆಯ ಕಿಡಿಗಳೆಂದೂ

ಕುಡಿಯೊಡೆಯುತ್ತಿರಲಿ…

ದೀಪ ಹಚ್ಚೋಣ ಬಾ…

‍ಲೇಖಕರು Admin

9 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading