ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮ್ಮನಿರು, ಗುನುಗುನಿಸಿ ಎದೆ ಸೀಳಬೇಡ..

ಅಂತಿಮ ಆಸರೆ

ಸುಮಿತ್ ಮೇತ್ರಿ

ಯಾರೋ
ಭವಿಷ್ಯವಾಣಿ ಆಡಿದ
ಆ ದುರ್ದಿನ ಬಂದಿದೆ
ಈಗ ಯಾರಿಗೂ ಕವಿತೆ, ಕಾವ್ಯ ಬೇಕಾಗಿಲ್ಲ
ಸತ್ಯ, ಅಹಿಂಸೆ ಮಾತು ಒತ್ತಟ್ಟಿಗಿರಲಿ
ಜಗತ್ತಿನಲ್ಲಿ ಯಾವ ಅದ್ಭುತವೂ ಉಳಿದಿಲ್ಲ
ನನ್ನ ಅಂತಿಮ ಆಸರೆಯೆ
ಸುಮ್ಮನಿರು,
ಗುನುಗುನಿಸಿ ಎದೆ ಸೀಳಬೇಡ

ಇನ್ನೂ,
ಮೊನ್ನೆ ಮೊನ್ನೆಯವರೆಗೆ
ಸ್ವಚ್ಛಂದವಾಗಿ ಹಾರಿ
ಮುಸ್ಸಂಜೆ ಮುನಿಸು ತರುತ್ತಿದ್ದ
ಹಾಡು ಹಕ್ಕಿಯೆ
ಇವತ್ತು ಹೊಟ್ಟೆಗೆ ಹಿಟ್ಟಿಲ್ಲದೆ
ತಿರುಕನಂತೆ ತಿರುಗಿ
ಕಂಡ ಕಂಡವರ ಮನೆಯ
ಮನದ ಬಾಗಿಲು ಬಡಿಯುತ್ತಿದೆ

ಪಟ್ಟ ಪಾಡೆಲ್ಲವು ಕತೆಕಟ್ಟಿ
ಹಾಡು ಹುಟ್ಟಿ ಹಾಡಾಗಿ ಹರಿದು
ಎಡತಾಕಿ ಸಾಕಾಗಿದೆ
ನೋವಿನ ಹರಳು ಘನಗಟ್ಟಿ
ಯಾರೋ ಆಡಿದ ಭವಿಷ್ಯವಾಣಿ?
ಕ್ಷಮಿಸಿ, ಮರೆತುಹೋಗಿದೆ
ಅಂತಿಮ ಆಸರೆಯೆ
ಹೊರಡು ಇನ್ನೂ ದಾರಿ ದೂರವಿದೆ.

 

‍ಲೇಖಕರು avadhi

25 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading