ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮ್ಮನಿರಲಿ ಹೇಗೆ? ಹೇಳು ನೀನು?

ರೇಶ್ಮಾ ಶೆಟ್ಟಿ

ಸರ್ವಪರಿತ್ಯಾಗಿಯಾಗಿ ಬದುಕನ್ನೇ ಜಯಿಸಿದವನು ನೀನು

ಮೌನ, ಧ್ಯಾನದಿಂದ ಸಕಲವನ್ನು ಗೆದ್ದವನು

ಈ ಅಲ್ಪನ ಮಾತು ಕೇಳಿ ಆಗಬೇಕಾದುದ್ದೇನು?

ಆದರೂ, ಹೇಳಬೇಕೆಂದಿರುವೆ ಕೆಲವೊಂದನ್ನು!

ಸದಾ ವಟಗುಡುವ ಕಪ್ಪೆ ನಾನುfrog

ಸುಮ್ಮನಿರಲಿ ಹೇಗೆ? ಹೇಳು ನೀನು?

ಜಗದೆಲ್ಲೆಡೆ ಶಾಂತಿ ಸಂದೇಶ ಸಾರಿ,

ಧ್ಯಾನದಲ್ಲೇ ಎಲ್ಲವನು ಸಾಧಿಸಿ

ಲೌಕಿಕ ಸುಖವ ತ್ಯಜಿಸಿ ಹೀಗೆ ಬಂದು

ಏಕಾಂತದಲ್ಲಿ ಕುಳಿತರೆ ಹೇಗೆ ಹೇಳು?

ಅಲ್ಲಿ ಶಾಂತಿ ಕದಡಿದೆ…ಹಿಂಸೆ ಹೆಚ್ಚುತ್ತಿದೆ

ಅನ್ಯಾಯ-ಅಕ್ರಮ ತಾಂಡವಾಡುತ್ತಿದೆ

ಎಲ್ಲಾ ಗೊತ್ತಿದ್ದು ಮೌನಿಯಾಗಿರುವೆ ಹೇಗೆ ನೀನು?

ಜಗವೆಲ್ಲಾ ಮಲಗಿದ್ದಾಗ ಎದ್ದವನು ನೀನು

ಈಗ ಅದು ಹೇಗೆ ಕಣ್ಮುಚ್ಚಿ ಕುಳಿತಿರುವೆ ನೀನು?

ಗೊತ್ತಿದೆ ನನಗೆ ನೀನು ಜ್ಞಾನಿ,

ಎಲ್ಲವನು ತಿಳಿದವನು…ನಾನು ಅಜ್ಞಾನಿಯೇ

ಆದರೂ ಹೇಳುವೆ,

ಒಂದು ವೇಳೆ ನಿದ್ದೆಯಲ್ಲಿದ್ದರೆ ಎದ್ದು ಬಿಡು ಬುದ್ಧ…!

ಜಗಕೆ ಮತ್ತೊಮ್ಮೆ ಸಾರಿಹೇಳಿಬಿಡು ನಿನ್ನ ತತ್ವ…!

 

‍ಲೇಖಕರು Admin

3 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading