ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ

sa shi marulaiah2

ಸಾ ಶಿ ಮರುಳಯ್ಯ ಅವರು ಇನ್ನಿಲ್ಲ.

ಅವರ ನೆನಪಿನಲ್ಲಿ ಅವರ ಅತಿ ಜನಪ್ರಿಯ ಕವಿತೆಯ ಸಾಲುಗಳು

ಹಾಗೂ ಅದರ ನೃತ್ಯ ರೂಪಕದ ವಿಡಿಯೋ ನಿಮ್ಮೊಂದಿಗಿದೆ  

oil lamp

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಭೋಧ ಚಂದ್ರೋದಯ ರಾಗಾರುಣ ಜ್ವಾಲೆ
ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ಧಾರೆ
ಧಲ ಧಲ ಧಲ ಮೆದು ಹಾಸಲಿ ಗಾನ ಸುಪ್ತಲೋಲೆ ||

ಮಲೆನಾಡಿನ ಕೋಗಿಲೆಯೇ ಬಯಲನಾಡ ಮಲ್ಲಿಗೆಯೇ
ವಂಗ ವಿಷಯ ಭೃಂಗವೆ ಧವಳಗಿರಿಯ ಶೃ೦ಗವೆ
ಕಾವೇರಿ… ಗೋದಾವರಿ… ಗಂಗೆ ಯಮುನೆ ಸಿಂಧುವೆ ||

ಶತ ಶತ ಶತಮಾನಗಳ ಗುಪ್ತಗಾಮಿ ಚೇತನವೇ
ಋತು ಋತುವಿಗೂ ಹೂವಾಗಿ ಫಲವಾಗುವ ತನಿರಸವೇ
ಚಿಲಿಪಿಲಿಯಂಥಾಮೋದದಿ  ನಲಿದುಲಿವ ಕೂಜನವೇ
ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೇ ||

ನಸು ಹಸುರಿನ ಹಿಮಮಣಿಯೇ
ಎಳೆ ಬಿಸಿಲಿನ ಮೆಲುದನಿಯೇ
ಬಿರಿದ ಮುಗಿಲ ಬಿಂಕವೇ
ತೆರೆದ ಸೋಗೆ ನರ್ತನವೇ

oil lamp

ಉತ್ತರ ಕ್ಯಾಲಿಫೋರ್ನಿಯಾ ದ ಕನ್ನಡ ಕೂಟ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ 

ಸಾ ಶಿ ಮರುಳಯ್ಯ ನವರ ಈ ಹಾಡು  ಕೃಪೆ: ಇಂದು/ ಭಾವಸಂಗಮ 

‍ಲೇಖಕರು Admin

5 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading