ಸಾ ಶಿ ಮರುಳಯ್ಯ ಅವರು ಇನ್ನಿಲ್ಲ.
ಅವರ ನೆನಪಿನಲ್ಲಿ ಅವರ ಅತಿ ಜನಪ್ರಿಯ ಕವಿತೆಯ ಸಾಲುಗಳು
ಹಾಗೂ ಅದರ ನೃತ್ಯ ರೂಪಕದ ವಿಡಿಯೋ ನಿಮ್ಮೊಂದಿಗಿದೆ
ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಭೋಧ ಚಂದ್ರೋದಯ ರಾಗಾರುಣ ಜ್ವಾಲೆ
ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ಧಾರೆ
ಧಲ ಧಲ ಧಲ ಮೆದು ಹಾಸಲಿ ಗಾನ ಸುಪ್ತಲೋಲೆ ||
ಮಲೆನಾಡಿನ ಕೋಗಿಲೆಯೇ ಬಯಲನಾಡ ಮಲ್ಲಿಗೆಯೇ
ವಂಗ ವಿಷಯ ಭೃಂಗವೆ ಧವಳಗಿರಿಯ ಶೃ೦ಗವೆ
ಕಾವೇರಿ… ಗೋದಾವರಿ… ಗಂಗೆ ಯಮುನೆ ಸಿಂಧುವೆ ||
ಶತ ಶತ ಶತಮಾನಗಳ ಗುಪ್ತಗಾಮಿ ಚೇತನವೇ
ಋತು ಋತುವಿಗೂ ಹೂವಾಗಿ ಫಲವಾಗುವ ತನಿರಸವೇ
ಚಿಲಿಪಿಲಿಯಂಥಾಮೋದದಿ ನಲಿದುಲಿವ ಕೂಜನವೇ
ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೇ ||
ನಸು ಹಸುರಿನ ಹಿಮಮಣಿಯೇ
ಎಳೆ ಬಿಸಿಲಿನ ಮೆಲುದನಿಯೇ
ಬಿರಿದ ಮುಗಿಲ ಬಿಂಕವೇ
ತೆರೆದ ಸೋಗೆ ನರ್ತನವೇ
ಉತ್ತರ ಕ್ಯಾಲಿಫೋರ್ನಿಯಾ ದ ಕನ್ನಡ ಕೂಟ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ
ಸಾ ಶಿ ಮರುಳಯ್ಯ ನವರ ಈ ಹಾಡು ಕೃಪೆ: ಇಂದು/ ಭಾವಸಂಗಮ
0 ಪ್ರತಿಕ್ರಿಯೆಗಳು