ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಆಡುಕಳ ಬರೆದ ಸಾಲುಗಳು

ಸುಧಾ ಆಡುಕಳ

1.

ಮನಸೀಗ ಸುಖಾಸುಮ್ಮನೆ ಬಿರುಗಾಳಿಯ ಬೆನ್ನೇರಿದೆ

ಗಮ್ಯದ ಯೋಚನೆಯೀಗ ಅರ್ಥ ಕಳಕೊಂಡಿದೆ

2.

ಗಾಂಧಿ ಹುಟ್ಟಿದ ದಿನ ಒಳ ಹೊರಗೆಲ್ಲ ಅವರೆ

ನಕ್ಕರು ಗಾಂಧಿ, ಶಾಸ್ತ್ರೀಜಿ ಮರೆತುಹೋದರೆ?

3.

ಮೋಡ ಮುಸುಕಿದ ಒಂದು ನಿಶಾಂತ ಹಗಲು

ಬಿರುಮಳೆಯ ರಾತ್ರಿ ಚಿತ್ರ ಮನದ ಮೂಲೆಯಲ್ಲು

4.

ಬಾಯಾರಿದೆ, ನೀರು ಕುಡಿಸು

ಬಾಯಿಂದ ಬಾಯಿಗೆ ನೀರು ಸುರಿಯಿತು!

5.

ಬಣ್ಣಗೆಟ್ಟ ಪಾದ, ನೆರಿಗೆಗೊಂಡ ಕೈ

ಚಂದದ ವ್ಯಾಖ್ಯಾನಗಳು ಕಣ್ಣಿಂದ ಕಣ್ಣಿಗೆ ಬೇರೆಯಾಗುತ್ತವೆ

6.

ಪ್ರೇಮ-ಕಾಮ ಪೋಷಾಕು ಬದಲಿಸುತ್ತಲೇ ಹೋದವು

ಹಗಲು-ರಾತ್ರಿಗಳ ಬದಲು ಮುಗಿಯುವುದೇ ಇಲ್ಲ

7.

ಸತ್ಯವೆಂದರೆ ಬೆಳಕು, ಸುಳ್ಳು ಕತ್ತಲೆಯ ತುಣುಕು

ಕೆಲವೊಮ್ಮೆ ರಾತ್ರಿಯ ಸತ್ಯಗಳು ವ್ಯಾಖ್ಯಾನ ಬದಲಿಸುತ್ತವೆ

8.

ಕಂಠಿಯ ನಡುವಿಂದ ಗುಲಾಬಿಯೊಂದು ನಗುತ್ತದೆ

ಗಿಡದ ಗೊಡವೆಯಿರದ ಲೋಕ ಹೂ ಚಿವುಟುತ್ತದೆ

9.

ಹಗಲು ರಾತ್ರಿಗಳು ಕಲಸಿ ಹೋದಾಗಲೇ

ಪ್ರೇಮದ ಚಿತ್ರಕ್ಕೆ ರಂಗು ತುಂಬುವುದು

10.

ಬೆಳಕಿನೆದುರು ಬುದ್ಧ ನಗುತ್ತಿದ್ದ ಎಂದೆ

ನಗುವೇ ಬೆಳಕಲ್ಲವೆ? ಎಂದು ನಕ್ಕ ಬುದ್ಧ

‍ಲೇಖಕರು avadhi

7 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading