ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಜಾತ ಹೆಬ್ಬಾಳದ ಕವಿತೆ – ನೆನಪುಗಳೇ ಹಿತವೆನಗೆ…

ಸುಜಾತ ಹೆಬ್ಬಾಳದ

ಹೊಗಳಿಕೆಯ ಬೀಸಣಿಕೆಗಿಂತ ತೆಗಳಿಕೆಯ ಅಂಬುಗಳೇ ಹಿತವೆನಗೆ
ಬೀರುವ ಕೃತಕ ಮಂದಹಾಸಕ್ಕಿಂತ ತೋರುವ ನೈಜ ತಿರಸ್ಕಾರಗಳೇ ಹಿತವೆನಗೆ

ಅಸ್ಪಷ್ಟ ಭಾವಗಳ ಅರ್ಥಗಳ ಹುಡುಕುತ ದಿಕ್ಕೆಟ್ಟು ಅಲೆಯಲಾರೆ
ಗಾಢಾಂಧಕಾರದಿ ಬೆಳಕನ್ನು ಅರಸುವ ಒಂಟಿ ಪಯಣದ ಹಾದಿಗಳೇ ಹಿತವೆನಗೆ

ಹತ್ತಿರವಿದ್ದು ಸವಿನುಡಿಗಳನ್ನಾಡುತ ಹೃದಯ ತಟ್ಟದ ಬಂಧುಗಳೇಕೆ
ದೂರವಿದ್ದರೂ ತಪಿಸುವ ಮನ ತಟ್ಟನೆ ನೆನಸುವ ಸಂಬಂಧಗಳೇ ಹಿತವೆನಗೆ

ಬೇಕೆನಿಸುವ ಮುನ್ನವೇ ಸಿಗುವ ದೌಲತ್ತು ಸವಲತ್ತು ಕ್ಷಣದ ಹೊಳಪು
ಹಂಚಿ ತಿನ್ನುತ ಕೂಡಿ ಬಾಳಲು ಕಲಿಸುವ ಬರಗಾಲದ ನೆನಪುಗಳೇ ಹಿತವೆನಗೆ

ಬಾಳಿಗೆ ಅರ್ಥ ಕೊಡದ ದೀರ್ಘಾಯಸ್ಸು ಹೊಲದ ಕಳೆಯಂತೆ “ಸುಗ್ಗಿ”
ಬದುಕು ಹಸನಾಗಿಸುವ ಕಾಯಕದಿ ಮಿಂಚಿ ಮರೆಯಾಗುವ ಕ್ಷಣಿಕ ವರ್ಷಗಳೇ ಹಿತವೆನಗೆ

‍ಲೇಖಕರು Admin

19 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading