ಸುಚಿತ್ರ ಕೆ ಮಂಗಳೂರು

ನಾವು ಹೇಗಿದ್ದೇವೊ
ಅದ ತಿಳಿಯದ ಅನರ್ಹರು
ಸದಾ ಬೇರೆಯದರ
ಕುರಿತೇ ಯೋಚಿಸುವವರು
ತನ್ನ ದುಃಖವ ಅಡಗಿಸುವವರು
ಪರರ ದುಃಖಕ್ಕೆ ನಲಿಯುವವರು
ಇದು ನಾವುಗಳು
ನಾವುಗಳು ಅಂದರೆ
ನರಸತ್ತ ಮಾನವರು……….
ಛೀ ಎಂದು ಉಗುಳುವರು
ಇನ್ನೊಬ್ಬರು ತುಳಿದ ಕೆಸರ ಕಂಡು
ಅದೇ ಕೆಸರಲ್ಲೇ ಮಿಂದಿಹೆನು
ಎಂಬುದರ
ಅರಿವಿದ್ದೇ ಮರೆತು………..
ಹೋರಾಡುವರು, ಕಾದಾಡುವರು,
ಬೊಬ್ಬಿರಿಯುವರು
ನಮ್ಮ ಜಾತಿ, ನಮ್ಮ ಧರ್ಮ ಎಂದು
ಸಾವಿರಾರು ಮತಗಳ ಹುಟ್ಟು ಹಾಕಿ ಮೆರೆಯುವರು
ಕೊನೆಗೊಂದು ದಿನ
ಜಾತಿ, ಧರ್ಮದ ಸೊಲ್ಲೇ ಇಲ್ಲದೆ
ಮಣ್ಣಾಗುವರು…
ಇದು ನಾವುಗಳು…
ನಮ್ಮತನದ ಅರಿವಿಲ್ಲದ
ಸರಸತ್ತ ಮಾನವರು….






ನಿಮ್ಮ ಕವಿತೆ ತುಂಬಾ ಇಷ್ಟವಾಯ್ತು. ಅಭಿನಂದನೆಗಳು; ಸುಚಿತ್ರಾ ಮೇಡಂ.
ಮಾನವೀಯತೆಗಾಗಿ ಹಾಗು ಮಾನವನ ನಡುವಿನ ಸಂಕುಚಿತ ಮನೋ ಭಾವನೆಯನ್ನು ಬಿಡಿಸಿಡುತ್ತಿದೆ ಈ ಕವನ ವಂದನೆಗಳು
thank u so much avadhi….
Thank you Sir…..
chendada kavana
ತುಂಬಾ ಸುಂದರ ಕವನ. ನಿಮ್ಮ ಸಾಮಾಜಿಕ ಕಳಕಳಿಗೆ ಅಭಿನಂದನೆಗಳು. ಹೀಗೆ ಬರೆಯುತ್ತೀರಿ…