ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಚಿತ್ರದಲ್ಲಿ ಕೆ ರಾಮಯ್ಯ

ಸುಚಿತ್ರದ ಕಿ.ರಂ ನುಡಿಮನೆಯಲ್ಲಿ ಪ್ರತಿ ಶನಿವಾರ ಸಂಜೆ 5:30 ಕ್ಕೆ ಸಾಹಿತ್ಯ ಸಂಜೆ ಒಂದು ವರ್ಷಕ್ಕೂ ಮಿಗಿಲಾಗಿ ನಡೆದುಕೊಂಡು ಬಂದಿದೆ.ಈ ಸಾರಿ ಕೊಟಗಾನಹಳ್ಳಿ ರಾಮಯ್ಯ ನವರು ಕವಿತಾ ವಾಚನ ಮಾಡುತ್ತಾರೆ ನಂತರ ಸಂವಾದವಿರುತ್ತದೆ

ಈ ಸಾರಿ ಕೊಟಗಾನಹಳ್ಳಿ ರಾಮಯ್ಯ ನವರು ಕವಿತಾ ವಾಚನ ಮಾಡುತ್ತಾರೆ ನಂತರ ಸಂವಾದವಿರುತ್ತದೆ

ಕೊಟಗಾನಹಳ್ಳಿ ರಾಮಯ್ಯ ಕನ್ನಡ ಸಾರಸ್ವತ ಲೋಕಕ್ಕೆ ಬಹುಪ್ರಿಯವಾದ ಹೆಸರು. ಗ್ರಾಮೀಣ ಅನಕ್ಷರಸ್ತ ಮಕ್ಕಳು, ದಲಿತರು, ಕೊಳಗೇರಿಯ ನಿವಾಸಿಗಳು ಹೀಗೆ ನಿರ್ಲಕ್ಷಕ್ಕೊಳಗಾದವರನ್ನು ಸಂಘಟಿಸಿ, ನಾಟಕ ರಚನೆ, ನಿರ್ದೇಶನ, ಪ್ರದರ್ಶನಗಳ ಮೂಲಕ ಶಿಷ್ಟ ರಂಗಭೂಮಿಗೆ ಪರ್ಯಾಯ್ ರಂಗಭೂಮಿಯನ್ನು ಕಟ್ಟಿ ಯಶಸ್ವಿಯಾದವರು ರಾಮಯ್ಯ.

ಬಹಳ ಹಿಂದೆ ಇವರು ಪ್ರಾರಂಭಿಸಿದ ‘ಪಂಚಮ’ ಪತ್ರಿಕೆ ಒತ್ತರಿಸಲ್ಪಟ್ಟ ಬದುಕುಗಳ ಸಂಕಟಕ್ಕೆ ಅನುಕಂಪದಾಚೆಗಿನ ಹೋರಾಟ ಸ್ವತಂತ್ರ ಅಸ್ತಿತ್ವವನ್ನು ಕಲ್ಪಿಸಿಕೊಟ್ಟಿತು. ಅಂಥ ಇನ್ನಿತರ ಪತ್ರಿಕೆಗಳಿಗೆ ಮಾದರಿಯಾಯಿತು. ರಾಮಯ್ಯ ಲಂಕೇಶ್ ಪತ್ರಿಕೆ, ಸುದ್ದಿ ಸಂಗಾತಿ, ಮುಂಗಾರು ಮೊದಲಾದ ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದರು. ತನ್ನ ನಿಲುವು ಬದ್ದತೆಗೆ ವಿರುದ್ಧ ಅನ್ನಿಸಿದಾಗ ಸಿಡಿದೆದ್ದು ಬಂದರಾಗಲೀ ರಾಜಿ ಮಾಡಿಕೊಂಡವರಲ್ಲ. ಅಂತೆಯೇ ಅವರು ಅಲೆಮಾರಿ ಜಂಗಮ.

 

‍ಲೇಖಕರು G

19 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading