ಸುಗತ ಬರೆಯುತ್ತಾರೆ: ಓಲ್ಗಾ ಎಂಬ ಹೆಣ್ಣು ಮಾಡಿದ ಕಲೆಯ ಮೌಲ್ಯಮಾಪನ

ಸುಗತ ಶ್ರೀನಿವಾಸರಾಜು

ಕೆಲವು ದಿನಗಳ ಹಿಂದೆ ಯುರೋಪಿನಲ್ಲಿ ಸದ್ದು ಮಾಡಿದ ಒಂದು ಸಮಾಚಾರ, ಭಾರತದ ಪತ್ರಿಕೆಗಳಲ್ಲಿ ಅಷ್ಟಾಗಿ ಪ್ರಚಾರ ಪಡೆಯ ಲಿಲ್ಲ. ಮೂಲೆಯಲ್ಲಿ, ಸಣ್ಣ ಸುದ್ದಿಯಾಗಿ ಬೆಳಕು ಕಂಡಿತು ಅಷ್ಟೆ. ಇದು ಸಂಪಾದಕರ ತಿಳಿವಿನ ಊನಕ್ಕೆ ಸಂಬಂಧಿಸಿದ ವಿಚಾರವೋ ಅಥವಾ ಓದುಗರ ಆಸಕ್ತಿಯ ಮಿತಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಯೋ ಅಥವಾ ಎರಡೂ ಅಂಶಗಳನ್ನು ಒಳಗೊಂಡಂತಹುದೋ ಎಂಬುದನ್ನು ನಾವು ಚರ್ಚಿಸಿ, ನಿರ್ಧರಿಸಬೇಕಾಗಿದೆ. ಈ ಚರ್ಚೆ ಮತ್ತೊಮ್ಮೆ ನಡೆಯ ಬಹುದು, ಆದರೆ ಈಗ ಸೀದಾ ಸಮಾಚಾರಕ್ಕೆ ಬರುವುದು ಉತ್ತಮ.
ಇದು ರೊಮೇನಿಯಾ ದೇಶದ ಬುಕಾರೆಸ್ಟ್ ಪಟ್ಟಣದಲ್ಲಿರುವ ಓಲ್ಗಾ ಡೊಗಾರು ಎಂಬ ಬಡ ಹೆಂಗಸಿನ ಸುತ್ತ ಬೆಳೆಯುತ್ತಿರುವ ಕಥೆ. ಈಕೆ ತನ್ನ ಮಗನನ್ನು ರಕ್ಷಿಸಲು ನಮ್ಮ ಕಲ್ಪನೆಗೂ ಮೀರಿದ ಒಂದು ಕೆಲಸವನ್ನು ಮಾಡಿದ್ದಾಳೆ. ಜಗತ್ತಿನ ಏಳು ಶ್ರೇಷ್ಠ ವರ್ಣಚಿತ್ರಕಾರರ ಕಲಾಕತಿಗಳನ್ನು ತನ್ನ ಅಡುಗೆಮನೆಯ ಒಲೆಯ ಮೇಲೆ ಹರಡಿ ಸುಟ್ಟಿದ್ದಾಳೆ. ಮೊದಲು ಈ ಕಲಾಕತಿಗಳನ್ನು ಅವಳು ಬುಕಾರೆಸ್ಟ್‌ಗೆ ಹತ್ತಿರ ಇರುವ ಕಾರಾಕ್ಲಿಯು ಎಂಬ ಊರಿನ ಸ್ಮಶಾನದಲ್ಲಿ ಆಡಗಿಸಿಟ್ಟಿದ್ದಳು. ಆನಂತರ ಪೋಲಿಸರು ಈ ವರ್ಣಚಿತ್ರಗಳ ಬೆನ್ನುಹತ್ತಿ ಬಂದಾಗ, ಮತ್ತೇನೂ ತೋಚದೆ ಅವುಗಳನ್ನು ಸುಟ್ಟುಬಿಟ್ಟಿದ್ದಾಳೆ.

ಈ ವರ್ಣಚಿತ್ರಗಳನ್ನು ಆಕೆಯ ಮಗ ತನ್ನ ಇಬ್ಬರು ಸಹಚರರೊಂದಿಗೆ ಅಕ್ಟೋಬರ್ 2012ರಲ್ಲಿ ಪಕ್ಕದ ನೆದರ್ಲೆಂಡ್‌ನ (ಡಚ್) ರಾತರ್‌ದಾಮ್‌ನಲ್ಲಿರುವ ಕುನ್‌ಸ್ತಾಲ್ ಗ್ಯಾಲರಿಯಿಂದ ದರೋಡೆ ಮಾಡಿದ್ದ. ಜನವರಿ 2013ರಲ್ಲಿ ಪೊಲೀಸರು ಆತನನ್ನು ಮತ್ತು ಆತನ ಸಹಚರರನ್ನು ಬಂಧಿಸಿ, ಈ ವರ್ಣಚಿತ್ರಗಳನ್ನು ತಲಾಶ್ ಮಾಡುವ ಕೆಲಸದಲ್ಲಿ ನಿರತ ರಾಗಿ ದ್ದರು. ಆದರೆ, ಕೆಲವು ದಿನಗಳ ಹಿಂದೆ ಈ ವರ್ಣಚಿತ್ರಗಳ ಬದಲಾಗಿ ಅವರಿಗೆ ಎದುರಾದದ್ದು ಅವುಗಳ ಬೂದಿ. ಈಗ ಎಲ್ಲವನ್ನೂ ಖಾತ್ರಿಪಡಿಸಿ ಕೊಳ್ಳಲು ಆ ಬೂದಿಯ ತಪಾಸಣೆ ನಡೆದಿದೆ.
ಈ ಏಳು ಕಲಾಕೃತಿಗಳ ಬೆಲೆಯನ್ನು ಅಂದಾಜು ಮಾಡುವುದು ಅಷ್ಟು ಸುಲಭವಲ್ಲ. ಏಕೆಂದರೆ, ಈ ವರ್ಣಚಿತ್ರಕಾರರ ಬೇರೆ ಕಲಾಕೃತಿಗಳು ನೂರಾರು ಕೋಟಿ ಡಾಲರ್‌ಗಳಿಗೆ ಮಾರಾಟವಾಗಿವೆ. ಹಾಗಾಗಿ, ಒಂದು ಅಂಕಿಯ ಎದುರಿಗೆ ಎಷ್ಟು ಸೊನ್ನೆ ಸುತ್ತಬೇಕು ಎಂದು ಹೇಳು ವುದು ಕಷ್ಟ. ಈ ಏಳು ಕಲಾಕೃತಿಗಳ ಕಲಾವಿದರು ಯುರೋಪಿನ ಮತ್ತು ಜಗತ್ತಿನ ನಿಕಟ-ಆಧುನಿಕ ಮತ್ತು ಆಧುನಿಕ ಕಲೆಯ ಮುಖ್ಯ ಅಧ್ಯಾಯ ಗಳನ್ನು ಬರೆದವರು. ಇದರಲ್ಲಿ ಪಿಕಾಸೋ, ಕ್ಲಾಡ್ ಮೋನೆ, ಹೆನ್ರಿ ಮಾತಿಜ್, ಪೌಲ್ ಗಾಗಿನ್, ಮೇಯರ್ ಡಿ ಹಾನ್ ಮತ್ತು ಲೂಸಿಯನ್ ರಾಯ್ಡ್ ಸೇರಿದ್ದಾರೆ.
ಈ ಆಧುನಿಕ ಕಲಾಕೃತಿಗಳ ಅಂದಾಜು ಬೆಲೆಯನ್ನು ಕಲ್ಪಿಸಿಕೊಳ್ಳಲು ನಿಮಗೆ ಎರಡು ಉದಾಹರಣೆ ಕೊಡಬಹುದು. ಫ್ರೆಂಚ್ ಕಲಾವಿದ ಸೆಜಾನ್ ಬಿಡಿಸಿದ ‘ಕಾರ್ಡ್ ಪ್ಲೇಯರ್ಸ್’ ಎಂಬ ಒಂದೇ ಒಂದು ಕಲಾಕತಿ 250 ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾಗಿತ್ತು (ಅಂದಾಜು ಸಾವಿರದ ಐನೂರು ಕೋಟಿ ರೂಪಾಯಿಗಳು!). ಇದು ಜಗತ್ತಿನ ಚರಿತ್ರೆಯಲ್ಲೇ ಅತಿ ಹೆಚ್ಚು ಬೆಲೆ ಪಡೆದ ಕಲಾಕತಿ; ಕೊಂಡವನು ಕತಾರ್ ದೇಶದ ಅಮೀರ. ಹಾಗೇ, ಡಚ್ ಮಾಂತ್ರಿಕ ವ್ಯಾನ್‌ಗೋನ ‘ಸನ್ ಫ್ಲವರ್ಸ್’ ಕಲಾಕೃತಿಯನ್ನು ಒಬ್ಬ ಜಪಾನಿ ಶ್ರೀಮಂತ 100 ಮಿಲಿಯನ್ ಡಾಲರ್‌ಗಳಿಗೆ ಕೊಂಡುಕೊಂಡಿದ್ದಾನೆ.
ಈಗ ಇಲ್ಲಿ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಈ ಕಲಾಕೃತಿಗಳನ್ನು ಸುಟ್ಟು ಹಾಕಿದ ಓಲ್ಗಾ ಎಂಬ ಮಹಿಳೆಗೆ ಅವುಗಳ ಬೆಲೆ ತಿಳಿದಿತ್ತೇ? ದರೋಡೆ ಮಾಡಿದ ಆಕೆಯ ಮಗನಿಗೆ ಅವುಗಳ ಬೆಲೆ ತಿಳಿದಿರಲು ಸಾಧ್ಯ; ಆದರೆ ಪುತ್ರನನ್ನು ರಕ್ಷಿಸಬೇಕು ಎಂಬ ಮಮಕಾರ ದಿಂದ ವರ್ತಿಸಿದ ಮಹಿಳೆಗೆ ಅದು ತಿಳಿದಿರುವ ಸಾಧ್ಯತೆ ಕಡಿಮೆ ಎಂದೇ ನಾವು ಈ ಸಂದರ್ಭದಲ್ಲಿ ಊಹಿಸಬೇಕಾಗಿದೆ. ಜೊತೆಗೆ, ಇಷ್ಟು ಪ್ರಖ್ಯಾತ ಕಲಾಕೃತಿಗಳನ್ನು ಕದ್ದರೆ ಅದನ್ನು ಪ್ರದರ್ಶಿಸುವುದಾದರೂ ಹೇಗೆ ಎಂಬ ಪ್ರಶ್ನೆ ನಮ್ಮ ತಲೆಯೊಳಗೆ ಸುಳಿಯದೇ ಇರದು. ಬೆಲೆ ತಿಳಿಯದ ತಾಯಿ ದಡ್ಡಿ ಇರಬಹುದು, ಆದರೆ ಮಗನೂ ಒಂದು ರೀತಿಯಲ್ಲಿ ದಡ್ಡನೇ ಇರಬಹುದಲ್ಲವೇ? ಇಂತಹ ದೊಡ್ಡ ಕಲಾಕೃತಿಗಳ ದರೋಡೆ ಮಾಡುವ ಜಾಲದಲ್ಲಿ ಆತ ಶಾಮೀಲಾಗಿದ್ದರೆ, ಏನೂ ಅರಿಯದ ತನ್ನ ತಾಯಿಯ ಕೈಯಲ್ಲಿ, ಸ್ಮಶಾನದ ಗಾಳಿ-ಬೆಳಕಲ್ಲಿ ಅವುಗಳನ್ನು ಜೋಪಾನ ಮಾಡಿ ಡಲು ಏಕೆ ಕೊಟ್ಟ? ಈ ಸಹಜ ಕುತೂಹಲದ ಪ್ರಶ್ನೆಗಳಿಗೆ ರೊಮೇನಿಯಾದ ಪೋಲಿಸರೇ ಉತ್ತರ ಹುಡುಕಬೇಕು. ಆದರೆ, ಈ ಸಾಮಾನ್ಯ ಜ್ಞಾನದ ಪ್ರಶ್ನೆಗಳ ಹೊರತಾಗಿ, ಅಂತಾರಾಷ್ಟ್ರೀಯ ಕಲಾ ಮಾರುಕಟ್ಟೆಯ ಬಗೆಗೂ, ಒಂದು ಕಲಾಕತಿಯ ಬೆಲೆ ನಿಗದಿಯಾಗುವು ದರ ಹಿಂದಿನ ವ್ಯವಸ್ಥೆ, ಪ್ರಕ್ರಿಯೆ, ತರ್ಕದ ಬಗೆಗೂ ನಮ್ಮಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.
ನಮ್ಮ ದೇಶದಲ್ಲೂ ಅನೇಕರು ಓಲ್ಗಾ ಡೊಗಾರು ರೀತಿಯಲ್ಲೇ ವರ್ತಿಸಲು ಸಾಧ್ಯ. ಅವರಿಗೆ ಚಿನ್ನ, ಬೆಳ್ಳಿ, ವಜ್ರದ ಬೆಲೆ ತಿಳಿಯುತ್ತದೆ; ಆದರೆ, ಒಂದು ಕಲಾಕೃತಿಯ ಬೆಲೆ ತಿಳಿದಿರಬೇಕು ಎಂದು ಆಪೇಕ್ಷಿಸು ವುದು ತಪ್ಪಾಗುತ್ತದೆ. ಇದು ಅಜ್ಞಾನಕ್ಕೆ, ಬಡತನಕ್ಕೆ ಸಂಬಂಧಪಟ್ಟ ವಿಚಾರವಾಗಲೀ; ಸಂಸ್ಕತಿಯ, ಚರಿತ್ರೆಯ ಪರಿಚಯ ಇಲ್ಲದಿರುವುದಕ್ಕೆ ಸಂಬಂಧಪಟ್ಟದ್ದಾಗಲೀ ಅಲ್ಲ. ಆದರೆ, ಇದು ಆಧುನಿಕ ಕಲೆಯ ಅಮೂ ರ್ತತೆ, ಕಲಾ ಜಗತ್ತು ಕಟ್ಟಿಕೊಂಡಿರುವ ವರ್ಗ ಪಾಳಯ ಮತ್ತು ಕಲೆ ಎಂಬುದು ಅಸಾಮಾನ್ಯವಾದುದು, ಅಂದರೆ ಸಾಮಾನ್ಯರಿಗೆ ಹೊರತಾ ದದ್ದು ಎಂಬ ಪ್ರೇರೇಪಿತ ಕಲ್ಪನೆ ಈ ವಿಚಾರದ ಮೇಲೆ ಕೊಂಚ ಬೆಳಕು ಚೆಲ್ಲಬಹುದು. ಓಲ್ಗಾಳ ಮಗನಿಗೂ ಆ ಕಲಾಕೃತಿಗಳ ಬೆಲೆ ಬೇರೆಯವ ರಿಂದ ತಿಳಿದು ಗೊತ್ತೇ ವಿನಾ ತಾನೇ ಅದನ್ನು ಕಂಡುಕೊಂಡದ್ದಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಆತನೇ ಅವುಗಳ ಮೌಲ್ಯವನ್ನು ಕಂಡುಕೊಂಡಿದ್ದರೆ, ಅವನು ಅದನ್ನು ದರೋಡೆ ಮಾಡುವ ಕೆಲಸಕ್ಕೆ ಕೈಹಾಕುತ್ತಿರಲಿಲ್ಲ. ಅವನು ಮಾರುಕಟ್ಟೆಯ ಮಾಹಿತಿಯ ಬಗ್ಗೆ ತಲೆಕೆಡಿಸಿಕೊಂಡನೇ ಹೊರತು, ಕಲೆಯ ಅಂತಃಸತ್ವದ ಬಗ್ಗೆ ಚಿಂತಿಸಲಿಲ್ಲ. ವಿಪರ್ಯಾಸವೆಂದರೆ, ಕಲೆಯನ್ನು ಕೊಳ್ಳುವ ಅನೇಕ ಮಂದಿ ಥೇಟು ಓಲ್ಗಾಳ ಮಗನ ರೀತಿಯಲ್ಲೇ ವರ್ತಿಸುತ್ತಾರೆ. ಕಲಾಕತಿಯೊಂದರಲ್ಲಿ ಇಂದು ಸಾವಿರ ರೂಪಾಯಿ ತೊಡಗಿಸಿದರೆ, ಅದು ಐದು ವರ್ಷಗಳ ಕಾಲದಲ್ಲಿ ಐವತ್ತು ಸಾವಿರ ಆಗಬಹುದೇ ಎಂದು ಕೇಳುವ ಮಂದಿಯೇ ಹೆಚ್ಚು. ಅವರಿಗೆ ಕಲಾಕತಿಯ ದರ್ಶನ ಮುಖ್ಯವಾಗುವುದಿಲ್ಲ, ಅದು ಬರೀ ಹೂಡಿಕೆಯ ಸಾಧನವಾಗುತ್ತದೆ. ಅವರು ಕಲಾಕೃತಿಯೊಂದರ ಜೊತೆಗೆ ದೀರ್ಘ ನೋಟದ ಸಂವಾದ ನಡೆಸುವುದಾಗಲೀ, ಆ ರೀತಿಯ ಸಂವಾದದಿಂದ ಏರ್ಪಡುವ ನೆಂಟಸ್ತಿಕೆಯನ್ನು ಅರಿಯುವುದಾಗಲೀ ಮಾಡುವುದಿಲ್ಲ.
ಪಶ್ಚಿಮದ ಕಲಾ ಮಾರುಕಟ್ಟೆಯಲ್ಲಿ ಮಿಂದೆದ್ದಿರುವ, ನಮ್ಮ ಬೆಂಗಳೂರಿನವರೇ ಆದ ಅಕುಮಲ್ ರಾಮಚಂದರ್ ಅವರನ್ನು ನಾನು ಒಮ್ಮೆ, ”ಕಲಾಕೃತಿಯೊಂದಕ್ಕೆ ಬೆಲೆ ಕಟ್ಟುವ ಪ್ರಕ್ರಿಯೆ ಪಶ್ಚಿಮದಲ್ಲಿ ಹೇಗೆ ನಡೆಯುತ್ತದೆ?,” ಎಂದು ಕೇಳಿದೆ. ತಮ್ಮ ಎಂದಿನ ಮಾತಿನ ಉತ್ಸಾಹದಲ್ಲಿ ಅವರು ತಮ್ಮ ಸ್ವಕೀಯ ಚರಿತ್ರೆಯ ತುಣುಕುಗಳನ್ನು ಮುಂದುಮಾಡಿ, ನನಗೆ ಸರಿಸುಮಾರು ಒಂದು ಗಂಟೆಗಳ ಕಾಲ ಪಾಠ ಮಾಡಿದರು.
ಅಕುಮಲ್ ರಾಮಚಂದರ್‌ರಿಗೇ ಈ ಪ್ರಶ್ನೆ ಕೇಳುವುದರ ಹಿಂದೆ ಒಂದು ದೊಡ್ಡ ಕಾರಣವಿತ್ತು. ಈತ ಎಂಬತ್ತರ ದಶಕದಲ್ಲಿ ಯುರೋಪ್ ಮತ್ತು ಅಮೆರಿಕದ ಕಲಾ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಸಾಹಸಿ. ಈ ಕಾರಣಕ್ಕಾಗಿಯೇ ಅವರ ಮೇಲೆ ಚಾನೆಲ್ 4, ಬಿಬಿಸಿ, ಪಿಬಿಎಸ್ ತರಹದ ಪ್ರತಿಷ್ಠಿತ ವಾಹಿನಿಗಳು ಸಾಕ್ಷ್ಯಚಿತ್ರಗಳನ್ನು, ಸಂದರ್ಶನಗಳನ್ನು ಮಾಡಿದ್ದವು. ಈ ಸಾಕ್ಷ್ಯಚಿತ್ರಗಳ ನಿರೂಪಣೆಯನ್ನು ಬರೆದು, ಪ್ರಸ್ತುತಪಡಿಸಿದವರಲ್ಲಿ ಸಲ್ಮಾನ್ ರುಶ್ದಿ, ತಾರೀಕ್ ಅಲಿ ತರಹದ ಬೌದ್ಧಿಕ ಜಗತ್ತಿನ ದಿಗ್ಗಜರು ಮುಂಚೂಣಿಯಲ್ಲಿದ್ದರು. ಲಂಡನ್‌ನ ‘ಸಂಡೆ ಒಬ್‌ಸರ್ವರ್’ ಪತ್ರಿಕೆ ಇವರ ಬಗ್ಗೆ ಮುಖಪುಟ ಲೇಖನ (ಮತ್ತೆ ರುಶ್ದಿ ಬರೆದದ್ದು) ಛಾಪಿಸಿದ್ದಲ್ಲದೆ, ಅಮೆರಿಕದ ಪ್ರತಿಷ್ಠಿತ ‘ನ್ಯೂಯಾ ರ್ಕರ್’ ಪತ್ರಿಕೆ ಸುದೀರ್ಘ ಮೂವತ್ತು ಪುಟಗಳ ಲೇಖನ ಅಚ್ಚುಹಾಕಿತು. ಅಕುಮಲ್ ಮಾಡಿದ ವಿಸ್ಮಯಕಾರಿ ಕೆಲಸ ಇಷ್ಟೆ: ಹೆರಾಲ್ಡ್ ಶಪಿನ್‌ಸ್ಕಿ ಎಂಬ ಕಳೆದುಹೋಗಿದ್ದ ಕಲಾವಿದನನ್ನು (Abstract Expressionism ಎಂಬ ಅಮೂರ್ತ ಕಲಾಪಂಥಕ್ಕೆ ಸೇರಿದವನು) ಪತ್ತೆ ಹಚ್ಚಿ, ಅವನ ಕಲಾ ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಿ, ಪಶ್ಚಿಮದ ಕಲಾ ವಿಮರ್ಶಕರು ಮತ್ತು ಕಲಾ ವ್ಯಾಪಾರದ ನಿಪುಣರು ಒಮ್ಮೆಗೆ ಶಪಿನ್‌ಸ್ಕಿಯನ್ನು ಅಸಾಧಾರಣ ಪ್ರತಿಭೆ ಎಂದು ಒಪ್ಪುವಂತೆ ಮಾಡಿದ್ದು ಅಕುಮಲ್ ಹಿರಿಮೆ. ಶಪಿನ್‌ಸ್ಕಿಯ ಈ ಪರಿಚಯದಿಂದ ಆಧುನಿಕ ಕಲಾ ಚರಿತ್ರೆಯ ಪುಟಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು.
ಇಂತಹ ಹಿನ್ನೆಲೆ ಇರುವ ಅಕುಮಲ್, ಕಲಾಕೃತಿಯ ಬೆಲೆಕಟ್ಟುವ ಪ್ರಕ್ರಿಯೆಯನ್ನು ವಿವರಿಸಿದ್ದು ಹೀಗೆ: ಶಪಿನ್‌ಸ್ಕಿಯನ್ನು ಅನ್ವೇಷಿಸಿದ ಹೊತ್ತಿನಲ್ಲಿ ಅವರ ಕಲಾಕೃತಿಗಳಿಗೆ ಬೆಲೆ ಕಟ್ಟುವಾಗ ಬಹಳ ಜಾಗರೂಕತೆ ಯನ್ನು ವಹಿಸಬೇಕಾಗಿ ಬಂತು. ಈ ಪ್ರಕ್ರಿಯೆಯನ್ನು ಬಹಳ ಎಚ್ಚರದಿಂದ ಮುಂದುವರಿಸಿದ್ದು ಲಂಡನ್‌ನ ಮೇಯರ್ ಗ್ಯಾಲರಿಯ ಜೇಮ್ಸ್ ಮೇಯರ್. ಶಪಿನ್‌ಸ್ಕಿ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ ಮೊದಲು ನಡೆದದ್ದು ಇದೇ ಮೇಯರ್ ಗ್ಯಾಲರಿಯಲ್ಲಿ. ಜೇಮ್ಸ್‌ನ ತಂದೆ ಫ್ರೆಡ್ಡಿ ಮೇಯರ್ ಪಿಕಾಸೋನ ಕಲಾಕೃತಿಗಳ ವರ್ತಕನಾಗಿದ್ದ. ಹಾಗಾಗಿ, ಜೇಮ್ಸ್‌ಗೆ ಕಲಾಕೃತಿಯೊಂದರ ಬೆಲೆ ನಿಗದಿಪಡಿಸುವುದರ ಬಗ್ಗೆ ಒಂದು ಸಹಜ ಒಳನೋಟವಿತ್ತು. ಅತಿ ಹೆಚ್ಚೂ ಅನ್ನಿಸದೆ, ಕಡಿಮೆಯೂ ಅನ್ನಿಸದ ಹಾಗೆ ಸಮತೋಲನದ ಗೆರೆ ಎಳೆಯುವುದು ಆತನಿಗೆ ತಿಳಿದಿತ್ತು. ಶಪಿನ್‌ಸ್ಕಿಯ ಕಲಾಕೃತಿಯನ್ನು, ಅದು ಹೊಸದಾಗಿ ಅನ್ವೇಷಣೆಗೊಂಡದ್ದು ಎಂಬ ಕಾರಣಕ್ಕೆ, ನಾವು ತೀರಾ ಹೆಚ್ಚು ಬೆಲೆ ನಿಗದಿಪಡಿಸಿದ್ದರೆ ಅದನ್ನು ಮಾರಾಟ ಮಾಡುವುದಕ್ಕೆ ತೊಂದರೆಯಾಗು ತ್ತಿತ್ತು. ಮಾರಾಟವಾಗದಿ ದ್ದರೆ ಶಪಿನ್‌ಸ್ಕಿಯ ಕಲೆಯ ಪ್ರಸರಣೆಗೆ ತೊಡಕಾಗುತ್ತಿತ್ತು. ಹೀಗಾಗಿ ನಾವು ಒಂದು ಮಧ್ಯದ ದಾರಿ ಅನುಸರಿಸಿ ದೆವು. ಆ ಮಧ್ಯದ ದಾರಿಗೂ ಒಂದು reference point ಬೇಕಿತ್ತು. ನಮಗೆ ಆ ಗುರುತಿನ ಚಿಹ್ನೆ ಸಿಕ್ಕಿದ್ದು ವಿಲೆಂ ಡಿ ಕೂನಿಂಗ್ (abstract expressionism ಪಂಥದ ದಿಗ್ಗಜ) ಎಂಬ ಶಪಿನ್‌ಸ್ಕಿಯ ಸಮ ಕಾಲೀನ ಕಲಾವಿದನಲ್ಲಿ. ಆತನ ಕಲಾಕೃತಿಯೊಂದು ಕೆಲವು ತಿಂಗಳುಗಳ ಹಿಂದೆ (1984ರಲ್ಲಿ) ಒಂದು ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ದರಕ್ಕೆ ಮಾರಾಟವಾಗಿ ದೆಯೆಂದು ನಮಗೆ ತಿಳಿದಿತ್ತು. ಹಾಗಾಗಿ, ಹೊಸದಾಗಿ ಪರಿಚಯಿಸುತ್ತಿರುವ ಶಪಿನ್‌ಸ್ಕಿಯ ಕಲಾಕೃತಿ ಗಳನ್ನು ಹತ್ತು ಸಾವಿರ ಡಾಲರ್‌ನಿಂದ ಇಪ್ಪತ್ತೈದು ಸಾವಿರ ಡಾಲರ್‌ಗಳ ಅಂತರದಲ್ಲಿ ಮಾರಾಟ ಮಾಡಲು ತೀರ್ಮಾನಿಸಿದೆವು. ಈ ದರವನ್ನು ಕಲಾ ವಿಮರ್ಶಕರು, ಕಲಾ ವ್ಯಾಪಾರಿಗಳು ಹಾಗೂ ಕಲಾ ಪೋಷಕರು reasonable ಎಂದು ಒಪ್ಪಿಕೊಂಡರು. ಅತಿ ಆಸೆಯಿಂದ ನಾವು ಹೆಚ್ಚಿನ ಬೆಲೆ ನಿಗದಿಪಡಿಸಿದ್ದರೆ, ಕಲಾ ಮಾರುಕಟ್ಟೆಯಲ್ಲಿ ಶಪಿನ್‌ಸ್ಕಿಗೆ ಜಾಗ ಕಲ್ಪಿಸುವುದು ಕಷ್ಟವಾಗುತ್ತಿತ್ತು. ಕಾಲ ಕಳೆದಂತೆ, ಶಪಿನ್‌ಸ್ಕಿ ಹೆಚ್ಚು ಹೆಚ್ಚು ಒಪ್ಪಿತನಾಗುತ್ತಾ ಹೋದಂತೆ ಆತನ ಕಲಾಕೃತಿಗಳ ಬೆಲೆಯೂ ಹೆಚ್ಚಾದದ್ದು ಬೇರೆ ಮಾತು, ಎಂದು ಅಕುಮಲ್ ತಿಳಿಸಿದರು.
ಅಕುಮಲ್ ಮಾತಿನಲ್ಲಿ ನಾವು ಸೂಕ್ಷ್ಮವಾಗಿ ಗ್ರಹಿಸಬೇಕಾದದ್ದು ಕಲಾಕೃತಿಯ ಬೆಲೆ ನಿಗದಿ ವಿಚಾರದಲ್ಲಿ ಕಲಾ ಸಮುದಾಯದ ನಡುವೆ ಒಂದು ಒಮ್ಮತವನ್ನು (consensus) ಏರ್ಪಾಟು ಮಾಡುವುದು ಬಹಳ ಮುಖ್ಯ ಎಂಬ ಅಂಶ. ಆ ಒಮ್ಮತ, ಕಲಾ ಚರಿತ್ರೆ, ವೈಯಕ್ತಿಕ ವರ್ಚಸ್ಸು, ಕಲಾ ವಿಮರ್ಶಕರು ಮತ್ತು ವರ್ತಕರ ಸರಿ ಅಂದಾಜು, ಇತ್ಯಾದಿ ಅಂಶಗಳ ಮೇಲೆ ನಿರ್ಬಲವಾಗಿರುತ್ತದೆ. ಹೀಗೊಮ್ಮೆ ಒಮ್ಮತ ಏರ್ಪಡದಿದ್ದರೆ ಅಥವಾ ಬೆಲೆಯನ್ನು ಕೃತಕವಾಗಿ ಏರಿಸಿದರೆ, ಆ ಕಲಾಕೃತಿ ಅಥವಾ ಕಲಾವಿದ ಕೆಲವೇ ವರ್ಷಗಳಲ್ಲಿ ಬೆಲೆ ಕುಸಿತ ಅನುಭವಿಸಬೇಕಾಗುತ್ತದೆ. ತೊಂಬತ್ತರ ದಶಕದಲ್ಲಿ ನಡೆದ ಒಂದು ಘಟನೆಯಲ್ಲಿ ವ್ಯಾನ್‌ಗೋನ ಕಲಾಕೃತಿ ‘ಐರಿಸ್ ಹೂಗಳು’ ಬೆಲೆ ಕುಸಿತ ಅನುಭವಿಸಿತು. ಅಂತಾರಾಷ್ಟ್ರೀಯ ಹರಾಜು ಸಂಸ್ಥೆಯಾದ ಕ್ರಿಸ್ಟೀಸ್ ಇದನ್ನು ಅಲೆನ್ ಬಾಂಡ್ ಎಂಬ ಆಸ್ಟ್ರೇಲಿಯಾದ ಶ್ರೀಮಂತನಿಗೆ ಅರವತ್ತೈದು ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಿತು. ಆದರೆ, ಆನಂತರ ತಿಳಿದುಬಂದಿದ್ದೇನೆಂದರೆ, ಆ ಕಲಾಕೃತಿಯ ಬೆಲೆಯನ್ನು ಕೃತಕವಾಗಿ ಏರಿಸುವ ಸಲುವಾಗಿ ಕ್ರಿಸ್ಟೀಸ್ ಸಂಸ್ಥೆಯೇ ಅಲೆನ್ ಬಾಂಡ್‌ಗೆ ನಲವತ್ತು ಮಿಲಿಯನ್ ಡಾಲರ್ ಸಾಲ ನೀಡಿತ್ತು. ಅಂದರೆ, ಆ ಕಲಾಕತಿಯ ನಿಜ ಬೆಲೆ (ಕ್ರಿಸ್ಟೀಸ್ ದಷ್ಟಿಯಲ್ಲಿ) ಕೇವಲ ಇಪ್ಪತ್ತೈದು ಮಿಲಿಯನ್ ಡಾಲರ್
ವಿಜಯ ಕರ್ನಾಟಕದಲ್ಲಿ ಪ್ರಕಟಿತ

‍ಲೇಖಕರು G

July 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: