– ನರೇಶ್ ಮಯ್ಯ
ಅಂಗನಾಂಗನೆಯ ಅಂಬುಗೆಯ ಅಪ್ಪುಗೆಯೇ
ಅಹಹಾ. . .
ಆತ್ಮಸಾನ್ನಿಧ್ಯದ ಅಂತರಂಗದ ಅಲೌಕಿಕ ಸುಖವೇ
ಬಾ ಇತ್ತ ಬಾ ಇತ್ತ ನನ್ನತ್ತ ಬಿತ್ತುತ್ತ
ನಿನ್ನೊಲವ ಕಾವ.
ಕಾದು ಕಾದೆದ್ದು ಸೆಟೆದೆಳೆದ
ಸರ್ಪ ಸಂಭೋಗದ ಸೊಗದ ಸಂಗಡ
ಸರಸವಾಡುತ್ತೆ ಇನಿಯೆ
ಗುಂಡಿಗೆಯೊಳಗಣ ಗಂಗಾಂತರಂಗ.
ಬಿಳಲು ಬಿದ್ದು
ಬೀಡು ಬೀಡಲ್ಲೂ ನಿನ್ನ ಬೇಡಿ ನಡೆದ
ಎಡೆಬಿಡದ ಹಾದಿ
ನಡೆದು ಬರಬಲ್ಲ ದಾರಿಯದಲ್ಲ.
ಇನ್ನೂ ಹುಡುಕುತ್ತಿದ್ದೇನೆ ನಿನ್ನ ಬರವ,
ಬಹೆಯೋ ಬಾರದಿಹೆಯೋ ?
ಹದಿಹರೆಯದೀ ಹೃದಯದಾ ಮೊರೆತ
ಎನ್ನೊಡಲ ಕಡಲಡಿಯ ಭೋರ್ಗರೆತ
ಕೇಳಿಲ್ಲವೇ ನೀ. .
ಸೌದಾಮಿನಿ, ಬಾ ಸುಖದ ಸ್ವಪ್ನಸೌಧಕ್ಕೆ,
ಸ್ವಪ್ನಗಾನದ ಶೀಘ್ರ ಸ್ಖಲನಕ್ಕೆ,
ಮಸಣಾಂತರದ ಮೌನ ಮಿಲನಕ್ಕೆ.
ಇಂತೀ
ನಿನ್ನೊಲವ ತುಂಬಿರುವ. . . . .







0 Comments