ಸುಕ್ರಜ್ಜಿ ಅಂದ್ರೇನೇ ತಾಯ್ತನ..

ನಾಗರಾಜ್ ಹರಪನಹಳ್ಳಿ

ಸುಕ್ರಜ್ಜಿ ಅಂದ್ರೆ ತಾಯ್ತನ. ನಾನು ಸುಕ್ರಜ್ಜಿಯನ್ನು ಕಂಡಾಗಲೆಲ್ಲಾ, ಅವರೇ ಹತ್ರ ಕರೆದು ಮಾತಾಡೋದು, ಕಷ್ಟ ಸುಖ ಹೇಳೋದು ರೂಢಿ.

ಬೆಂಗಳೂರು ಆಸ್ಪತ್ರೆ ಗೆ ದಾಖಲಾದಾಗ ಚಿಕಿತ್ಸೆ ಖರ್ಚು ಭರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದಿನ್ನು ಸುಕ್ರಿ ಬೊಮ್ಮ ಗೌಡರ ಆಕೌಂಟ್ ತಲುಪಿಲ್ಲ. ಬ್ಯಾಂಕ್ ಆಕೌಂಟ್, ಆಧಾರ್ ಕಾರ್ಡ್ ಸಂಸ್ಕೃತಿ ಇಲಾಖೆಗೆ ಕೊಟ್ಟಿದ್ದೀನಿ ಅಂದ್ರು.
ಇಷ್ಟೇ ಸೂಕ್ಷ್ಮ.

ನಾಳೆ ವಿಚಾರಿಸಿ, ಪೋನ್ ಮಾಡ್ತಿನಿ ಅಮ್ಮ ಅಂದೆ. ಇದು ಮಂಗಳವಾರ ಅಪರಾಹ್ನ ಕಾರವಾರ ರಾಕ್ ಗಾರ್ಡನ್ ನಲ್ಲಿ ನಡೆದ ಮಾತುಕತೆ.

ಬುಧವಾರ:
ಬೆಳಿಗ್ಗೆ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ದೂರವಾಣಿ ಕರೆ ಮಾಡಿ ಸುಕ್ರಜ್ಜಿ ಆಕೌಂಟ್ ನಂಬರ್ ತಗೊಂಡಿದ್ದು ಯಾಕೆ ಅಂತ ವಿಚಾರಿಸಿದೆ. ರಿಸಿಪೆಂಟ್ ನಂಬರ್ ಮಾಡಿ ಕಳಿಸಲು ಕೇಂದ್ರ ಕಚೇರಿ ಸೂಚನೆಯನ್ನು ವಿವರಿಸಿದರು ಅಲ್ಲಿನ ಪ್ರಥಮ ದರ್ಜೆ ಸಹಾಯಕ ಮಂಜು ಮಡಿವಾಳ.

ನಂತರ ನಿರ್ದೇಶಕರಾದ ವಿಶುಕುಮಾರ್ ಸರ್ ಹತ್ರ ಮಾತಾಡಿ, ಸುಕ್ರಜ್ಜಿ ವಿಷಯ ಪ್ರಸ್ತಾಪಿಸಿದೆ. ಸ್ವಲ್ಪ ಸಮಯ ಕೊಡಿ. ಸಿಬ್ಬಂದಿಗೆ ವಿಚಾರಿಸಿ ಸರಿಪಡಿಸುವೆ ಎಂದರು.

ಕೊನೆಯ ಮಾತು:
ಹದಿನೆಂಟು ತಿಂಗಳು ಮಗುವಾಗಿದ್ದಾಗ ತಾಯಿ ಕಳೆದು ಕೊಂಡ ನನಗೆ , ಸುಕ್ರಜ್ಜಿ ಜೊತೆ ಇರುವಾಗಲೆಲ್ಲಾ ತಾಯ್ತನ ಅನುಭವಕ್ಕೆ ಬರುತ್ತದೆ. ಸರಳತೆ ಮತ್ತು ವಾತ್ಸಲ್ಯ ,ಪ್ರೀತಿ ಅವರ ಬಳಿ ಇದ್ದಾಗ ನದಿಯಂತೆ ಪ್ರವಹಿಸುತ್ತದೆ. ಈ ಕಾಲದ ಮೌಖಿಕ ಸಾಹಿತ್ಯ ಜಗತ್ತಿನ ಶ್ರೇಷ್ಠ ವ್ಯಕ್ತಿತ್ವದ ಜೊತೆ ಇದ್ದ ಸಂತಸ ಒಳಗೊಳಗೆ ಜೀವ ಸೆಲೆಯಂತೆ ಜಿನುಗುತ್ತದೆ.

 

‍ಲೇಖಕರು Avadhi GK

March 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. nutana doshetty

    houdu Nagaraj,

    Sukrajji ananyta taytnada jeeva. Naanu Karwaradalli avarannu Bhetiyadagalella kenne hindiye mataduttiddaru.
    Adu avarige Kaadu kalisuva sahajate haagu nisprahate

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: