ಸೀರೆ ಎಂಬುದೇ ಒಂದು ಕವಿತೆ

ಅವ್ವನ ಸೀರೆ ಮಡಚೋಕ್ಕಾಗಲ್ಲ!

ಹಂದಲಗೆರೆ ಗಿರೀಶ್‌ । ದೀಪದಮಲ್ಲಿ

ಸೀರೆ ಎಂಬುದೇ ಒಂದು ಕವಿತೆ. ನೂಲು ನೂಲು ಬೆಸೆಯುತ್ತಾ ನೇಯ್ದ ಆರು ಮೊಳದ ಕವಿತೆಯದು. ಹೇಗೆ ಕವಿತೆ ಕವಿಯಿಂದ ಕವಿಗೆ ಭಿನ್ನವಾಗಿ ಒಲಿಯುವುದೋ, ಹೇಗೆ ಕವಿತೆ ಓದುಗರಿಂದ ಓದುಗರಿಗೆ ಭಿನ್ನವಾಗಿ ದಕ್ಕುವುದೋ, ಹಾಗೆಯೇ ಸೀರೆ ಎಂಬುದು ಉಟ್ಟ-ಕಂಡ ಪ್ರತಿಯೊಬ್ಬರಿಗೂ ಭಿನ್ನ ಭಿನ್ನ ಭಾವ ಹೊಮ್ಮಿಸುತ್ತದೆ.

ಕೆಲವರಿಗೆ ಸೀರೆಯೆಂದರೆ ಸಂಭ್ರಮ, ಮತ್ತೆ ಕೆಲವರಿಗೆ ಸೀರೆಯೆಂದರೆ ಕರಾಳ ಛಾಯೆ. ಕೆಲವರ ಸ್ವಾಭಿಮಾನ, ಮತ್ತೆ ಕೆಲವರಿಗೆ ಬಂಧನ. ಸೀರೆ ಎಂದರೆ ಸಿರಿತನ, ಸೀರೆ ಎಂದರೆ ಬಡತನ. ಸೀರೆ ಎಂದರೆ ಮಮತೆ, ಸೀರೆ ಎಂದರೆ ಪ್ರೇಮ. ಸೀರೆ ಎಂದರೆ ಅನುಭವ, ಸೀರೆ ಎಂದರೆ ಅನುಭಾವ. ಹೀಗೆ ಸೀರೆ ಎನ್ನುವುದು ಹಲವು ನೋಟ, ಹಲವು ಕಾಣ್ಕೆ.

ಇಂಥ ಸೀರೆಯು ಕನ್ನಡದ ಕವಿಮನಸುಗಳ ಎದೆಗೆ ಹೇಗೆ ಒದಗಿದೆ? ಎಂಬ ಕುತೂಹಲ ನಮ್ಮದಾಗಿತ್ತು. ಅದೊಂದು ಮೊಗೆಯುತ್ತಾ ಹೋದಷ್ಟೂ ಮುಗಿಯದ ಕಡಲು. ಕಂಡಷ್ಟನ್ನು, ಕಾಡಿದಷ್ಟನ್ನು ಇಲ್ಲಿ ಹಿಡಿದಿಟ್ಟಿದ್ದೇವೆ.

ಬದುಕಿನ ಬಂಡಿ ಸಾಗಿಸಲು ಹಲವರದು ಹಲವು ದಾರಿ. ನಾವು ಆರಿಸಿಕೊಂಡದ್ದು ಈ ‘ಸುರಗಿ’ ಎಂಬ ಘಮಲನ್ನು. ವ್ಯಾಪಾರ ಎನ್ನುವುದು ಜೀವನೋಪಾಯ ಎನ್ನುವುದರಲ್ಲಿ ತಕರಾರಿಲ್ಲವಷ್ಟೇ. ಅಂತಹ ಜೀವನದ ಉಪಾಯದಲ್ಲಿ ಕವಿತೆ ಇಲ್ಲದಿದ್ದರೆ ಹೇಗಾದೀತು? ಆದ್ದರಿಂದ ಸುರಗಿಯನ್ನು ಸಾಹಿತ್ಯದ ದಾರದಲ್ಲಿ ಕಟ್ಟಿ ಮಾಲೆಮಾಡಲು ಇರಿಸಿದ್ದೇವೆ, ಕನ್ನಡಮ್ಮನ ಪಾದಕ್ಕೆ.

ಅನಿಕೇತನ

ʼಅನಿಕೇತನʼ ಸಂಸ್ಥೆಯು, ಕಲೆ, ಸಂಸ್ಕೃತಿ ವೈಚಾರಿಕತೆಯ ಅಭಿವ್ಯಕ್ತಿ ಎಂಬ ಅಡಿಬರಹದೊಂದಿಗೆ 2004ರ ಕುವೆಂಪು ಅವರ ಜನ್ಮಶತಮಾನೋತ್ಸವ ವರ್ಷದಲ್ಲಿ ಪಯಣ ಆರಂಭಿಸಿತು. ಇದೊಂದು ಸಮಾನ ಮನಸ್ಕ ಗೆಳೆಯರ, ಬಂಧುಗಳ ಸಮೂಹ. ಬದುಕಿನ ಅವಶ್ಯಕತೆಗಳಿಗಾಗಿ ನಿರಂತರ ಬಡಿದಾಡಬೇಕಾದ ಹೊತ್ತಿನಲ್ಲೂ ತಮ್ಮೊಳಗಿನ ಕಲೆ/ಸಂಸ್ಕೃತಿ, ಪರಂಪರೆ ಎಡೆಗಿನ ಒಲವು ಜೀವಂತವಾಗಿಟ್ಟುಕೊಳ್ಳಲು ಹಾಗೂ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಇದೊಂದು ವೇದಿಕೆ. ಮನುಷ್ಯ ಮನುಷ್ಯರ ನಡುವೆ ಹಾಗೂ ಮನುಷ್ಯ ನಿಸರ್ಗದ ನಡುವೆ ಸಾವಯವ ಸಂಬಂಧವನ್ನು ಬೆಸೆಯಲು ರಂಗಭೂಮಿ, ಸಾಹಿತ್ಯ, ಚಿತ್ರಕಲೆ, ಸಿನಿಮಾ, ಛಾಯಾಗ್ರಹಣ, ಸಂಗೀತ ಮತ್ತು ನೃತ್ಯಕಲಾ ಮಾಧ್ಯಮಗಳನ್ನು ಪೋಷಿಸುವ ಕೆಲಸ ಇಲ್ಲಿ ನಿರಂತರ.

ʼಅನಿಕೇತನʼ ಎಂದರೆ ಬಯಲು… ಮಾನವತೆಯ ಸೂರು…

 

 

 

 

 

 

 

 

 

 

 

 

 

 

 

 

 

 

 

 

 

 

 

30-ಜನವರಿ-2020

‍ಲೇಖಕರು avadhi

February 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: