ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಬಿ ಚಿಲ್ಕರಾಗಿ ಓದಿದ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’

ಡಾ ಸಿ ಬಿ ಚಿಲ್ಕರಾಗಿ

ನೆಲಮೂಲ ಬೀಜಗಳ ಜತನಕ್ಕಾಗಿ ಹಾತೊರೆಯುವ ಮನಸುಗಳು ಯಾವಾಗಲೂ ಸಮಾಜಮುಖಿಯಾಗಿರುತ್ತವೆ. ನಿರಂತರ ಹೋರಾಟದೊಂದಿಗೆ ಬದುಕುವ ಶ್ರಮಸಂಸ್ಕೃತಿಯ ಜನತೆ ಪರಸ್ಪರ ಕೂಡಿ ಬದುಕುತ್ತಾರೆ. ಇಂತಹ ಪರಿಕಲ್ಪನೆಯಿಂದ ಚಿಂತಿಸುವ ಮನಸುಗಳು ಕಾಲಕಾಲಕೆ ಬೇಗುದಿಗೊಳಗಾಗುತ್ತವೆ. ಅಂತಹ ಚಿಂತನೆಯ ಕವಿ ಪ್ರಕಾಶ ಗ ಖಾಡೆಯವರು ನಾಡ ಜನತೆಯ ಶಾಂತಿ ಸುಖದ ಕನಸುಗಂಗಳ ಕವಿ.

ಪ್ರಸ್ತುತ ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ ಎನ್ನುವ ಕವಿತೆಗಳನು ನೀಡಿದ ಕವಿಯ ಮನ ಓದುಗರ ಸೆರೆ ಹಿಡಿಯುತಿದೆ. ಸಂಕಲನದ ತುಂಬಾ ೩೦೦ಕ್ಕೂ ಮಿಕ್ಕಿ ಚುಟುಕುಗಳಿವೆ. ಪ್ರತಿಯೊಂದರಲಿ ಭಾವದೀಪ್ತತೆ ಎದ್ದು ತೋರುತಿದೆ. ರಾಗಂ ಗುರುತಿಸಿದಂತೆ ಪ್ರಪಂಚದ ಶ್ರೇಷ್ಠ ಅನುಭಾವಿಕ ಚಿಂತನೆಗಳು ಕನ್ನಡ ಭಾವಕೋಶದಲಿ ಮರುಹುಟ್ಟು ಪಡೆದಿವೆ.

ಮಡುಗಟ್ಟಿದ ಭ್ರಾಂತಿಗೆ ಬೆನ್ನುಬಿದ್ದ ಯುವಜನತೆ ಕೇವಲ ಪಲ್ಲಕ್ಕಿ ಹೊರುವವರಾಗುತ್ತಿದ್ದಾರೆ, ಪ್ರಜ್ಞೆ ಜಾಗೃತಗೊಳ್ಳುತ್ತಿರುವ ಆಶಾವಾದ ಹೊರುವವರಿಗೆ ಹಿಂಬಾಲಕು ಕಾಯುತ್ತಿರುವ ಚಿತ್ರಣ ಕವಿಯ ಔನ್ನತ್ಯವನ್ನು ಪರಿಚಯಿಸುತ್ತದೆ. ಸುಂದರವಾದ ಪ್ರಕೃತಿ ಇದ್ದರೂ ವ್ಯವಸ್ಥೆಯ ಕ್ರೂರ ವ್ಯಂಗ್ಯ ಕವಿಗೆ ಕಾಡಿದೆ.

ಹತ್ತಾರು ಘಟನೆಗಳು, ವೇದಾಂತ, ಸಿದ್ಧಾಂತ, ಪ್ರೀತಿ ಪ್ರೇಮ, ಕಳಕಳಿ, ಪ್ರಾಣಿ ಪಕ್ಷಿಗಳ ಪ್ರತಿಮೆ, ಅನುಭಾವ ಸಂಕಲನದ ತುಂಬಾ ಉಳಿಸಿಕೊಂಡಿದೆ. ಕವಿಯ ವ್ಯಂಗ್ಯದ ಬಳಕೆ ಪ್ರಭುತ್ವಕ್ಕೆ ಚಾಟಿ ಏಟಿನಂತಿದೆ. ಒಟ್ಟಾರೆ ಇದೊಂದು ಅರ್ಥಪೂರ್ಣ ಸಮನಕಲನ ಬಳಸಿಕೊಂಡ ಮೊಳೆಗೋಡೆ ಸೇರಿತು ಬಾಪೂಜಿ ಚಿತ್ರತೂಗು ಹಾಕಿದಾಗ ಖುಷಿಗೊಂಡಿತು! ಸಾರ್ಥಕತೆಯ ಪರಿ ಚಿತ್ರಿಸುವ ಕವಿಯ ಕಾಣ್ಕೆ ಹಿರಿದು.

‍ಲೇಖಕರು Admin

29 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading