ಉಮಾ ಮುಕುಂದ್
ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆ
ಇಲ್ಲ ಇಲ್ಲ ಹಾಗೆಲ್ಲಾ ಮುಗಿಯುವುದಿಲ್ಲ ಎನ್ನುತ್ತದೆ
ಸಂಜೆಗಪ್ಪಿನ ಗಾಳಿಗೆ ತಲೆಯಾಡಿಸುವ ಬೇಲಿ ಹೂವು
ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆ
ಇಲ್ಲ ಇಲ್ಲ ಹಾಗೆಲ್ಲಾ ಮುಗಿಯುವುದಿಲ್ಲ ಎನ್ನುತ್ತದೆ
ವಾಷಿಂಗ್ ಮಿಷಿನ್ ನ ಬಟ್ಟೆ ಮಡಿಯಾದ ಅಲಾರ್ಮ್
ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆ
ಇಲ್ಲಾ ಇಲ್ಲಾ ಹಾಗೆಲ್ಲಾ ಮುಗಿಯುವುದಿಲ್ಲ ಎನ್ನುತ್ತದೆ
ನಾಳೆಯ ಮೊಸರಿಗೆಂದು ಕಾಸಿ ತೆಗೆದಿಟ್ಟ ತಣ್ವಾಲು
ಮುಗಿಯಿತು ಎಲ್ಲಾ ಮುಗಿಯಿತು ಅಂದುಕೊಳ್ತೇನೆ
ಇಲ್ಲಾ ಇಲ್ಲಾ ಹಾಗೆಲ್ಲಾ ಮುಗಿಸುವಂತಿಲ್ಲ ಎನ್ನುತ್ತದೆ ನಾಳೆಯ ಮೇಲಾರಕ್ಕೆ ಬಿಡಿಸಿಟ್ಟ ಸೊಪ್ಪು, ಕಾಳು
ಓ.. ಇದು ಮುಗಿಯದಿರಲಿ ಎಂದಿಗೂ ಎಂದೆಂದಿಗೂ
ಅಂದುಕೊಂಡು ಮಗ್ಗುಲು ಬದಲಿಸುತ್ತೇನೆ.
ಎಲ್ಲವೂ ಸಶೇಷ…
ಚೆನ್ನಾಗಿದೆ ಉಮಾ