ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಶ್ಚತ್ತಾಪ ಪಡಬಹುದು…

ಎಂ ವಿ ಶಶಿಭೂಷಣ ರಾಜು

ತಪ್ಪೇನಿಲ್ಲ
ಪಶ್ಚತ್ತಾಪ ಪಡಬಹುದು
ಕಳೆದುಕೊಳ್ಳುವುದೇನೂ ಇಲ್ಲ
ಸ್ವಲ್ಪ ಉಳಿದರೂ ನೋವು
ಕಲಿಯಬಹುದು ಹಲವು

ಮನಸಿನಲಿ ಕಟ್ಟಿದ್ದ ಕನಸುಗಳು
ಜಾರಬಹುದು ದಾರಿಗುಂಟ
ಒಂದು ತಪ್ಪು ಹೆಜ್ಜೆಗೆ,
ಬೊಗೆಸೆಯೊಡ್ಡಿ ನಿಂತರೂ
ಸೋರಬಹುದು  
ಸುಮಮಳೆಯು ಹಾದಿಗೆ

ಆಹ್ಲಾದಿಸಿ ಹಸಿವನ್ನು
ಕಾಯಬಹುದು ದಾರಿಯ
ಮನಸು ಹಗುರಾಗುವವರೆಗೆ,
ಮತ್ತೆ ಮತ್ತೆ ಮನನ ಮಾಡಿ
ಕುದಿಯಬಹದು ಹೃದಯ
ಕನಸು ಕರಗುವವರೆಗೆ

ಒಂದು ಕಾಲದ ಆನಂದವೇ
ಇಂದಿನ ಮರುಕ
ಅಂದು ಸಹ್ಯವಾದ ಬಯಕೆ
ಇಂದಿಗೆ ಕುಹಕ

ಅವಮಾನವೇನಲ್ಲಾ
ತಪ್ಪೊಪ್ಪಿಗೆ ಎದೆ ಬರಿದಾಗಲು,
ಮುಂದೆ ದಾರಿ ಸುಗಮವಾಗಿ
ಆನಂದವೊಂದುಳಿಯಲು

‍ಲೇಖಕರು Admin

29 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading