ಸಿರಾಜ್ ಅಹಮದ್ ಅನುವಾದಿತ ಕವಿತೆ – ಮೋಡಗಳು ಹನಿಗಟ್ಟಿ ದಟ್ಟವಾಗಲಿ

ಉರ್ದು ಮೂಲ:  ಫೈಜ್ ಅಹಮದ್ ಫೈಜ್

‘ಆಯೆ ಕುಛ್ ಅಬ್ರ್ ಕುಛ್ ಶರಾಬ್ ಆಯೇ’

ಕನ್ನಡಕ್ಕೆ: ಸಿರಾಜ್ ಅಹಮದ್

ಮೋಡಗಳು ಹನಿಗಟ್ಟಿ ದಟ್ಟವಾಗಲಿ ಹಾಗೆಯೇ ಮಧುಪಾತ್ರೆಯೂ ಜೊತೆಗಿರಲಿ

ಇದಾದ ಮೇಲೆ ನಿಗದಿಯಾಗುವ ಎಲ್ಲ ಶಿಕ್ಷೆಗಳೂ ನನಗಿರಲಿ

ಜೀವನದಲ್ಲಿ ನಾನುಂಡ ನೋವುಗಳ ಒಂದೊಂದೇ ಲೆಕ್ಕ ಹಾಕುತ್ತಿದ್ದೆ 

ಲೆಕ್ಕವಿಲ್ಲದಷ್ಟು ಸಲ ನಿನ್ನ ನೆನಪುಗಳೇ ಒಂದಾದ ಮೇಲೊಂದು ಒತ್ತರಿಸಿ ಬಂದವು

ಮಧುಪಾತ್ರೆಯ ತುತ್ತತುದಿಯಿಂದ ಚಂದ್ರ ಅವತರಿಸಲಿ

ಸಾಖಿಯ ಸುರಿಯುವ ಕೈಗಳಿಂದ ಬೆಳಗಿನ ಸೂರ್ಯ ಮೇಲೆದ್ದು ಬರಲಿ 

ದೇಹದ ನರನಾಡಿಗಳಲ್ಲಿ ಮಿಂಚಿನಂತೆ ಹೊಸ ರಕ್ತ ಹರಿದು ಬರಲಿ

 ಮುಸುಕು ಸರಿಸಿ ಅವಳು ಮತ್ತೊಮ್ಮೆ ನನ್ನೆಡೆಗೆ ನೋಡಲಿ

ಬದುಕಿನ ಎಲ್ಲ  ಸಾಲು ಪುಟಗಳೆಲ್ಲ  ನಿನ್ನ ಮಮತೆ-ಔದಾರ್ಯಗಳೇ

ತುಂಬಿ ತುಳುಕಿವೆಯೆಂದು ಹೃದಯದ ಎಲ್ಲ ಮಿಡಿತಗಳೂ ಹೇಳುತ್ತಿವೆ

ನಿನ್ನ ನೋವಿನ ಸರ್ವಾಧಿಕಾರದಿಂದ ನನಗಂತೂ ಬಿಡುಗಡೆಯಿಲ್ಲ

ನಿನ್ನಿಂದ ಬಿಡುಗಡೆಗಾಗಿ ದಿನವೂ ಹೃದಯ ನಡೆಸುವ ಪ್ರತಿಭಟನೆಗಳಿಗೆ ಕೊನೆಯಿಲ್ಲ 

ಒಳಗೆ ಹೆಪ್ಪುಗಟ್ಟಿದ ಮೌನ ಎಲ್ಲ ಕಡೆಯಿಂದ ಅಪ್ಪಳಿಸಿತು 

ಎಲ್ಲ ದಿಕ್ಕುಗಳೂ ನನ್ನ ಮೌನಕ್ಕೆ ಮತ್ತೆ ಮತ್ತೆ ಉತ್ತರಿಸಿದವು

ನಾ ನಡೆವ ಹಾದಿಯೇ ನನ್ನ ಗುರಿಯಾಗಿತ್ತು ಫೈಜ್

ಹೋದ ಕಡೆಯೆಲ್ಲ ಗೆಲುವೇ ನನಗೆ ಮನೆಯಾಗಿತ್ತು

‍ಲೇಖಕರು Adminm M

August 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: