ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿದ್ದು ಸಾವಳಸಂಗ ಹೈಕುಗಳು…

ಸಿದ್ದು ಸಾವಳಸಂಗ


ಸುಖ ಬೆನ್ನತ್ತಿ
ದುಃಖ ಸಂಪಾದಿಸಿದ
ಕನಸು ಭಗ್ನ !!



ನಾನೇನು ಕಮ್ಮಿ
ಮೆರೆದ, ಕೊನೆಯಲ್ಲಿ
ಮಣ್ಣಲ್ಲಿ ಮಣ್ಣು!!



ಮನ ಮರ್ಕಟ
ಮುಷ್ಠಿಯಲ್ಲಿ ಹಿಡಿಯೋ
ಮೂರ್ಖ ಮನುಜ !!



ಹೆಂಗಳೆಯರ
ಜಡೆ ಒಂದೊಂದು ಸಾರಿ
ಸೇಡಿನ ಹಾವು !!



ಬರಲಾರದ
ವಸ್ತು ಬಯಸಿದರೆ
ಬಂತೇನು ಫಲ !!


ಕರಿದ ವಸ್ತು
ದೇಹಕ್ಕೆ ಮಾರಕವು
ಮರೆತು ಬಿಡು !!



ಬಿಸಿಯ ರಕ್ತ
ಓಕುಳಿಯಾಡಿದರೂ
ಭಯವೇ ಇಲ್ಲ !!



ಯೌವನ ವನ,
ಮರಬಳ್ಳಿ ಸುಗಂಧ
ಪಸರಿಸಲಿ !!



ಹರೆಯ ಕರೆ
ನಿಯಂತ್ರಣದಲ್ಲಿರಿಸಿ
ಬಾಳು ಅಮೃತ !!


೧೦
ನಡು ನೀರಲ್ಲಿ
ಕೈಬಿಡುವ ಗೆಳೆಯ
ನಯ ವಂಚಕ !!

‍ಲೇಖಕರು avadhi

18 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading