ಸಿದ್ದು ದೇವರಮನಿ
ಹರಿವ ನದಿಗೆ ದಾರಿ ನೂರು
ಗಂಗೆ, ಗಂಗವ್ವ, ಗಂಗಾಮಾತೆಂದು ಪೂಜಿಸ್ಯಾರು.
ಸರಿಸುಮಾರು ಗಳಿಗೆ ಮುಳ್ಳಾಗಿ ತಿರುಗಿದರು
ಅವರಿಗದು ಅರ್ಥವಾಗದೆ, ಮೌನ ತಕರಾರು.
ಚೆಂದಾಗಿ ಉಡಲಿಲ್ಲ..ಮುಂದಾಗಿ ಉಣಲಿಲ್ಲ
ನೋವ ನುಂಗಿ ನಗುವ ಭಂಗಿ
ಈ ಜಗದ ಆನಂದ ಸೂತ್ರ!
ನನ್ನದೇನಿದೆ? ತನ್ಮಯತೆಯ ತೆನೆ ನಿಂತು
ಅನುರುಣಿಸಿದ ಕರುಣೆಗೆ ಕೆನೆ ಬಂತೋ..
ದಶದಿಕ್ಕು ಜೋರ್ಗಾಳಿ ಜೊತೆಗೂಡಿ
ಕಾವಲನಿರತ ಕನ್ನಡಿಗೆ ದುಮ್ಮಿಕ್ಕಿ
ಚೂರಾಗಿ ಬಿದ್ದ ನೂರ್ಮೂಖ.. ನೂರು ಕಣ್ಣು
ಇಲ್ಲಿ ಯಾವುದು ನನ್ನದು? ಯಾರು ನಾನು?

ಸುಖಾಸುಮ್ಮನೆ
ನೆಲದಡಿಯ ನಿಧಿ ನಿಂತಲ್ಲೆಂದು ಸಿಕ್ಕಿಲ್ಲ ನನಗೆ.
ನಂಬಿದ ಕಾಯಕ ಒಂದೇ ಸಹಜ ಸಂಪತ್ತು!
ಕಷ್ಟ.ಎಷ್ಟಾದರೇನು?
ಅಷ್ಟಕ್ಕೂ ಚಿಲ್ಲರೆಯಲ್ಲೇ ನಲಿದು ಹೊಲೆದ
ಕನಸ ಕೌದಿ ನನ್ನ ಬಳಿಯೇ ಇದೆಯಲ್ಲ.
ಅರಿವು..ಅನುಭವ ಹೊದ್ದು ತಿರುಗುವ ನಾನು
ಈ ಧರೆಗೆ ದಡ್ಡನಿರಬಹುದು..ದರಿದ್ರನಲ್ಲ!






0 Comments