ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಗಬಾರದೆ ಅಂಗೈಗೆ ಆಕಾಶ..

   ಶುಭಾ ಎ.ಆರ್. 

 

 

ಅಂಗೈಯಲೊಂದಿಷ್ಟು ಆಕಾಶ
ಕಣ್ರೆಪ್ಪೆ ಎತ್ತಿದರೆ ಸಾಕು
ತುಂಬಿ ಹರಿದದ್ದು ಆಕಾಶ
ಕೈಗೆಟುವಷ್ಟೇ ದೂರ
ಆದರೂ ಮೇಲೆ
ಮೇಲಕೇರುವ ಆಕಾಶ

ಕತ್ತಲೆ ಸುಳಿಸುಳಿದಂತೆ
ಬರಿದೆ ಚುಕ್ಕಿಗಳ ಚಿತ್ತಾರ
ಎರವಲು ಬೆಳಕಲ್ಲೂ
ಹೊಳೆವದು ಸಂಭ್ರಮ
ಬಾಯ್ದೆರದಂತೆ  ಖಾಲಿ ಹಣತೆಗಳು
ಚುಕ್ಕಿಗಳ ಬದುಕಿಗಿಲ್ಲ
ಅರ್ಥ ವಿಸ್ತಾರ

ಉದ್ದಗಲಗಳಿರದ ಆಕಾಶ
ಎತ್ತರೆತ್ತರ
ಇಡೀ ಸಾಮ್ರಾಜ್ಯಕೊಬ್ಬ ಸೂರ್ಯ
ಒಬ್ಬ ಚಂದ್ರ
ಸೋಲಿಲ್ಲದೆ ಗೆಲುವಿಲ್ಲದೆ
ಅದಲು ಬದಲಾಗುವ
ಅನಿವಾರ್ಯತೆಯಲ್ಲಿ
ನಿರಂತರ ಹೋರಾಟ

ಇರಲೊಂದು ಕಡೆ
ಸ್ವಂತಿಕೆಯಿರದ ನಕ್ಷತ್ರಗಳು
ಇರಲಿರಲಿ ಬೆಂಕಿ ಚೆಂಡು ಸೂರ್ಯ
ಇರಲಿ ಬಿಡಿ ಕಲೆ ಹೊತ್ತ ಚಂದಿರ
ಬದುಕು ಬೆಡುವುದು
ಇಷ್ಟೇ
ಸಿಗಬಾರದೆ ಅಂಗೈಗೆ
ಒಂದಿಷ್ಟೇ ಇಷ್ಟು ಆಕಾಶ
ಹಸುಗೂಸಿನಂತ ನಿರ್ಮಲ
ನಿರಭ್ರ ಆಕಾಶ

‍ಲೇಖಕರು admin

17 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading