ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವಿನ ಮನೆಯ ಸೂಕ್ಷ್ಮಗಳು

ಸಹನ ವದುಲಾಸ್

ಸಾವು-ಸಾವಿನ ನೋವು
ಎಲ್ಲವೂ ವಾಸ್ತವಿಕವಾಗಿ ತಿಳಿದಿದ್ದರು
ಜೀರ್ಣಿಸಿಕೊಳ್ಳಲಾಗದ ಸತ್ಯವದು
ಮಾನವನ ಕಲ್ಪನೆಗೂ ಮೀರಿದ್ದು

ಹುಟ್ಟು-ಮಾನವನ ಇರುವಿಕೆಯ ಸಂಕೇತವಾದರೆ
ಸಾವು-ಅವನ ಆತ್ಮದ ಇರುವಿಕೆಯ ಸೂಚನೆಯಾಗಿರುತ್ತದೆ
ಹುಟ್ಟು-ಸಾವು ಎರಡು ಒಂದೆ ಮನೆಯ
ಎರಡು ಬಾಗಿಲುಗಳಾಗಿದ್ದರು
ಒಂದು ಕೊಡುವ ಸಂತೋಷವನ್ನು
ಮತ್ತೊಂದು ಕಿತ್ತುಕೊಳ್ಳುತ್ತದೆ

ವಿಚಿತ್ರವೇನೆಂದರೆ,
ನಮ್ಮ ಹುಟ್ಟು-ಸಾವು ಎರಡರಲ್ಲೂ
ನಾವೇ ಮುಖ್ಯ ಪಾತ್ರದಾರಿಗಳಾಗಿದ್ದರು
ನಮ್ಮ ಪಾತ್ರ ಕೇವಲ ಕಾಲ್ಪನಿಕ
ನಿಜವಾಗಿ ನಟಿಸುವವರು ನಮ್ಮ ಆಪ್ತರು

ದೇವನೊಬ್ಬನೇ ಎಲ್ಲವನ್ನು ತಿಳಿದವ
ಎಲ್ಲಾ ತಿಳಿದಿದ್ದರು ಮೂಕನಾಗಿ ಎಲ್ಲವನ್ನು ವೀಕ್ಷಿಸುತ್ತಿರುವವ
ಕಷ್ಟ-ಸುಖಗಳನ್ನು ಈ ರೀತಿಯಲ್ಲೂ ಕೊಡುತ್ತಿರುವವ
ಹುಟ್ಟು-ಸಾವು ನಿಗೂಢ-ನಿರಂತರ…

ಜೀವನ

ಜೀವನ ಎಂದರೆ??
ಈ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ
ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು
ಆದರೆ ವಿಚಿತ್ರವೆಂದರೆ,
ಜೀವನವನ್ನು ಅರ್ಥಮಾಡಿಕೊಳ್ಳುವ ಮುನ್ನ
ಈ ಪ್ರಶ್ನೆಗೆ ಉತ್ತರ ಹುಡುಕಲೆಬೇಕು

ಜೀವನ,
ಅಂದುಕೊಂಡಷ್ಟು ಸುಲಭವೇನಲ್ಲಾ,
ಊಹಿಸಲಾಗದಷ್ಟು ಕಷ್ಟವೂ ಅಲ್ಲಾ
ಒಮ್ಮೆ ಇದು ಕಷ್ಟದ ಹೊಳೆಯಾದರೆ
ಮತ್ತೊಮ್ಮೆ ನಗೆಯ ಕಡಲಾಗಿರುತ್ತದೆ

ಜೀವನದಲ್ಲಿ ಪ್ರತಿಕ್ಷಣ ಕೂತುಹಲಕಾರಿಯೇ
ಒಮ್ಮೆ ಆಂತಕದಿಂದ ತುಂಬಿದರೆ,
ಇನ್ನೊಮ್ಮೆ ಆಶ್ಚರ್ಯಕರವಾಗಿರುತ್ತದೆ
ಮತ್ತೊಮ್ಮೆ ನೆಮ್ಮದಿಯ ಮಹಾಪೂರವಾಗಿರುತ್ತದೆ
ಮಗದೊಮ್ಮೆ ಬೇಸರದಿ ಆವರಿಸಿರುತ್ತದೆ

ಹೀಗೆ ಜೀವನವೂ,
ಕಷ್ಟ-ಸುಖಗಳ ಸಮ್ಮೀಲನ
ಭಾವ-ಭಾವನೆಗಳ ಸಮ್ಮೀಶ್ರಣ
ಸ್ನೇಹ-ಸಂಬಂಧಗಳ ಸಂಗಮ
ಪ್ರೀತಿ-ಪ್ರೇಮಗಳ ಸಮಾಗಮ
ಹಾಗಾದರೆ ಜೀವನ ಎಂದರೆ….???;-)

‍ಲೇಖಕರು Avadhi

22 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading