ವಿಶಾಲ ಮ್ಯಾಸರ್
——
ತಿಳಿಗೇಡಿ ಟ್ರೈನಿನ ಫ್ಯಾನಿಗೆ
ಎರೆಡು ಲೇಸುಗಳನ್ನು ಇಳಿಬಿಟ್ಟು ಬೂಟು ನೇತು ಹಾಕಿದ್ದರೆ
ಅದು ಕವಿತೆ ಅಲ್ಲ ಅಂತ ವಾದಿಸುತ್ತೀರಿ ಅದು ನಿಮ್ಮ ಮೂರ್ಖತನವಷ್ಟೆ
ಈ ಜನರಲ್ ಬೋಗಿಯ ಮಂದಿ ಯಾವಾಗಲೂ ಎಚ್ಚರವೇ ಇದ್ದು ಊರು ಬರುವ ಗಂಟ ತಪಸ್ಸಿಗೆ ನಿಂತಿರುತ್ತಾರೆ ಎಂದುಕೊಂಡರೆ ಅದು ನಿಮ್ಮ ಮೂರ್ಖತನವಷ್ಟೆ

ಓಮ್ಮೆ ಯೋಚಿಸಿ ರೈಲು ಸರಾಗವಾಗಿ ಸಾಗುವಾಗ ನಿರಾಳವಾಗಿ ಹೇಗೋ ನಿದ್ರೆ ಮಾಡುತ್ತೀರೇನೊ
ಒಂದು ವೇಳೆ ಅದೇ ಸುಸ್ತಾಗಿ ನಿದ್ರೆ ಮಾಡಿದರೆ
ಹೊಟ್ಟೆಯಲ್ಲಿ ಹಳಿ ತಪ್ಪಿದ ಹಾಡು
ಈ ಸಮೋಸ, ದೋಸೆ
ಚಾಯಿ, ಗಿರ್ಮಿಟ್ ಮಾರುವಾತ ಕಷ್ಟದ ಕಥೆ ಕೇಳುವಷ್ಟು ಅರಾಮಿದಾನ…?
ನಿಮ್ಮ ಪಾಡಿಗೆ ನೀವು ಓದಿ ಸಾರ್ ಆದರೆ ನಾವು ಹಾಡು ಕೇಳುವಾಗ ಡಿಸ್ಟರ್ಬ್ ಮಾಡಬೇಡಿ
ಈಗ ಎಲ್ಲಾರಮುಂದೆ ಬುಕ್ಕು ಹಿಡಿದು ಬುದ್ದಿಜೀವಿ ಅನ್ನಿಸಿಕೊಳ್ಳುವ ತೆವಲಾದರು ಏಕೆ ಬಂತು…!
ಸಾರಿ ನನ್ನ ಸ್ಟಾಪ್ ಬಂತು ಇಳಿಯುತ್ತೇನೆ bye…!






0 Comments