ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಾಧನೆ ಹಾದಿಯಲಿ ಸಾಕ್ಷಿಯಾದವಳೀಗ…' – ಸೌಮ್ಯಾ ಕವನ

ಧರಣಿಯಲಿ ದೊಡ್ಡವಳು…

– ಸೌಮ್ಯಾ ಕೆ  ಆರ್

ಧರಣಿ ಜೀವಜಂತುಗಳ ಜೀವದಾತೆ
ಇವಳೋ ಮನಕುಲಕೆ ಉಸಿರು ಎರೆದಾತೆ
ನವಮಾಸ ನೋವನುಂಡವಳು
ಬದುಕು ಕಲಿಸಿ, ಕೈ ಹಿಡಿದು ನಡೆಸಿದವಳು
ಇವಳು ಧರಣಿಯಲಿ ದೊಡ್ಡವಳು…
 
ವೇದೋಪನಿಷತ್ತು ಅರಿತವಳು
ಮೈತ್ರೇಯಿಯಾಗಿ ಮರೆದೆವಳು
ಮನುವಿನ ಕುತಂತ್ರಕ್ಕೆ ಬಲಿಯಾಗಿ
ಪಾಕ ಪ್ರವೀಣೆಯಾದವಳು
ಸಹನೆ ಮೆರೆದು ನಿಂತಿಹಳು

ರಾಮನೆದುರು ಸಾದ್ವಿಯಾಗಿ
ಉಸಿರು ಬಸಿದ ಧರಣಿಸುತೆ
ಕೌರವರ ಅಟ್ಟಹಾಸಕ್ಕೆ
ಕೊನೆ ಹಾಡಿದ ಪಾಂಚಾಲಿ ಈಕೆ
ಎಲ್ಲೆಲ್ಲೂ ನೆಪವಾಗಿ ಜಯಸಾಧಿಸಿದವಳಾಕೆ
 
ಹಸುಳೆ ಕನಸು ನನಸಾಯ್ತುರೀ…
ಚಂದಮಾಮನ ಸೋದರಿ
ತುತ್ತು ತಿನ್ನಿಸಿದ್ದ ಮರೆತಿರಿ
ನವ ಯುಗದ ಕಲ್ಪನೆಗೆ
ಜೀವ ತಂದದ್ದೇ ಹೆಣ್ತನ
 
ಸ್ತ್ರೀ, ಅಂದರೆ ಅಷ್ಟೇ ಸಾಕು…
ಹೊಗಳಿಕೆಯ ಹೊನ್ನ ಶೂಲ ಬೇಕಿಲ್ಲ
ಸಾಧನೆ ಹಾದಿಯಲಿ ಸಾಕ್ಷಿಯಾದವಳೀಗ
ಸಾಧಿಸುವ ಛಲದಿಂದ ಪುಟಿದೆದ್ದು ನಿಂತಿಹಳು
ಇವಳು ಧರಣಿಯಲಿ ದೊಡ್ಡವಳು
 
-ಸೌಮ್ಯಾ ಕೆ. ಆರ್.
 
 

‍ಲೇಖಕರು G

28 July, 2014

4 Comments

  1. ರಮೇಶ್ ಹಿರೇಜಂಬೂರು

    “ರಾಮನೆದುರು ಸಾದ್ವಿಯಾಗಿ
    ಉಸಿರು ಬಸಿದ ಧರಣಿಸುತೆ
    ಕೌರವರ ಅಟ್ಟಹಾಸಕ್ಕೆ
    ಕೊನೆ ಹಾಡಿದ ಪಾಂಚಾಲಿ ಈಕೆ
    ಎಲ್ಲೆಲ್ಲೂ ನೆಪವಾಗಿ ಜಯಸಾಧಿಸಿದವಳಾಕೆ”
    ಹಾಗೂ
    “ಹಸುಳೆ ಕನಸು ನನಸಾಯ್ತುರೀ…
    ಚಂದಮಾಮನ ಸೋದರಿ
    ತುತ್ತು ತಿನ್ನಿಸಿದ್ದ ಮರೆತಿರಿ”
    ನಿಜಕ್ಕೂ ಹೆಣ್ತನದ ಅಪರಿಮಿತ ತಾಕತ್ತನ್ನು ಇಲ್ಲಿ ವಿವರಿಸಿದ್ದೀರಿ… ಇಡೀ ಕಾವ್ಯ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಇಂಥ ಕವನ ನೀಡಿದ್ದಕ್ಕೆ ಧನ್ಯವಾದಗಳು….
    -ರಮೇಶ್ ಹಿರೇಜಂಬೂರು

  2. Venkatesha G

    Good.ಸ್ತ್ರೀಯನ್ನು ಗೌರವಿಸಬೇಕಾದ ಈ ಸಮಯದಲ್ಲಿ ಒಳ್ಳೆಯ ಕವಿತೆ. ಅಭಿನಂದನೆಗಳು.

  3. editorsuresha

    ಪದ್ಯ ಚೆನ್ನಾಗಿದೆ. ಆದರೂ ಪುರಾಣ ಕಥೆಗಳ ಹಂಗೇಕೆ ಎನ್ನುವುದೇ ಅರ್ಥವಾಗುವುದಿಲ್ಲ. ಇಂದಿನ ದಿನಗಳ ಕಥೆ ಐತಿಹ್ಯಗಳಲ್ಲೇ ಸತ್ವ-ಸತ್ಯಗಳ ದರ್ಶನ ಸಿಗುತ್ತದೆ.

  4. Anonymous

    Thank u For Avadhi team

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading