ಡಾ ಪ್ರತೀಭಾ ಕಾಗೆ

ಸಾಗುತಿಹವು ಇರುವೆಗಳು
ಸಾಲು ಸಾಲಾಗಿ ಕೊನೆಗೊಮ್ಮೆ
ಗುರಿ ತಲುಪುವ ಛಾತಿಯಿಂದಲೇ?
ತನಗಿಂತ ಭಾರವಾದವು
ಹೊತ್ಯೊಯುತಿಹ ಬುತ್ತಿಯ
ಗಂಟು ಎಷ್ಟು ದಿನದ
ಖಜಾನೆ ಏನೋ
ಗುರಿಮುಟ್ಟಲು ಸಾಲುಸಾಲಾಗಿಯೇ
ಕ್ರಮಿಸುತಿಹವು ನಿಯತ್ತನ
ಸಾಲು ಅದು ಒಂದೇ , ಒಂದು
ಮೋಸದ ಭಾವ ಕಾಣದು
ನಾ ಮುಂದು,ತಾ ಮುಂದು
ಎಂದೆನ್ನದೇ ಎಲ್ಲರ ಗುರಿ ಒಂದೇ
ಜಗಳವೇತಕೆ ,ಒಬ್ಬರಾದನಂತರ
ಒಬ್ಬರು ,ಒಬ್ಬರು ಬೇಗ,ಮತ್ತೊಬ್ಬರದು
ಸ್ವಲ್ಪ ತಡವಾದರು ಸರಿ
ಕಚ್ಚಾಟಬೇಡ ಎಂಬ ಹಿರಿಯರ
ಮಾತಿನಂತೆ ಕ್ರಮವಾಗಿ
ಸಾಗುತಿಹವು ನಿಷ್ಠೆ ಎಂದರೆ
ಇದುವೆ ಏನೊ ಎಂಬಂತೆ






Super