ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕ್ಷಿಯಾದ ಗೋಡೆಗಳು

ಪ್ರಮೋದ ಜೋಶಿ

ನಾನು ವಿರಾಗಿಯಾಗಿದ್ದೇನೆ
ಆತ ಬರುವದಕೆ ಯಾವ ಸಂತಸವೂ ಇಲ್ಲಾ
ಕೌತುಕ ಉನ್ಮಾದ ಇಲ್ಲವೇ ಇಲ್ಲಾ
ಎಲ್ಲ ಇದ್ದರೂ ಇಲ್ಲದ ಹೆಣ್ಣು ನಾ

ಹದಿನಾಲ್ಕು ವರ್ಷದ ಒಂಟಿತನ
ಆಸೆ-ಹರೆ ಎಲ್ಲ ಇಳಿಸಿದೆ
ಉಸಿರಿರುವ ದೇಹಕ್ಕೆ ಎಲ್ಲ ಹೊರೆಯಾಗಿದೆ
ಒಂಟಿತನವೇ ಉಸಿರಾಗಿಬಿಟ್ಟಿದೆ

ಬಂಗಾರ ಪಂಜರದೊಳ ಗಿಳಿಯಾಗಿಹೆನು
ನೊಡುವವರೇ ಎಲ್ಲಾ ತಂದವನೇ ಇಲ್ಲಾ
ರಮಿಸದೆ ತಣಿಸದೆ ಮಾಯವಾಗಿ ಬಿಟ್ಟಾ
ಈ ಸುದೀರ್ಘ ಅಗಲಿಕೆಯೊಳಗೆ ಮುಖವು ಮಾಸಿದೆ

ಬಂಗಾರದಾಭರಣ ಮೈ ತುಂಬಾ
ಬೇಕೆ ಸಿಂಗಾರ ನನಗೆ?
ತಣಿಸುವುದೇ ತನದ ತಾಪತನ
ಆತನಿಲ್ಲದ ಇಷ್ಟು ದಿನ
ಮೌನದ ಮೂಟೆಯಾಗಿ
ನಾಲ್ಕು ಗೊಡೆಗಳ ಮಧ್ಯ ಬಿದ್ದೆ
ಯಾರೂ ಅರಿಯದಿದ್ದರೂ ಗೋಡೆ ಅರಿತಿವೆ
ಹತಾಶೆ ವೇದನೆ ನೋವು
ನನ್ನ ಆಂತರಿಕ ಸಾವನ್ನ
ರೋಷ, ಆವೇಶ, ಸತ್ತ ಹರೆಯ
ಹೇಗೆ ತರಲಿ ಹದಿನಾಲ್ಕು ವರ್ಷದ ವಿರಹದೊಳಗೆ
ಊರ ತುಂಬ ಅವರು ಬರುವ ಸಂಭ್ರಮ
ನಾನು ಮಾತ್ರ ನೀರವ ಮೌನ
ಮುಗಿಯಿತೇನೋ? ಕಳೆದೆಲ್ಲಾ ದಿನಗಳು
ದೊರಕುವವೇ ನನಗೆ ಆ ಸುದೀರ್ಘ ಕ್ಷಣಗಳು
ದಿನ ದಿನವೂ ಕಿತ್ತುಕೊಂಡಿದೆ ಹರೆಯ
ಈಗ ಬಂದರೇನು? ಇನಿಯ ಸನಿಹ
ಸುದೀರ್ಘ ವಿರಹದಿ ವಿರಾಗಿಯಾದೆ
ಅವನಿಗಾಗಿ ಯಾವ ಭಾವನೆಯೂ ಇಲ್ಲಾ
ಇದ್ದರೂ ಕೊಂದ ನನ್ನ ಹೆಣ್ತತನಕ್ಕೆ
ಒಂಟಿತನಕ್ಕೆ ಸಾಕ್ಷಿಯಾದ ಗೋಡೆಗಳೆ
ನನಗೆ ಎಲ್ಲಾ.

‍ಲೇಖಕರು Admin

11 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading