
ಸವಿತಾ ನಾಗಭೂಷಣ
————–
ಅಯ್ಯೋ ಸೈರನ್ ಮೊಳಗಿದೆ
ಬೆಂಕಿ ಬಿದ್ದಿದೆ, ಹಗೆ-ಹೊಗೆ
ಧೂಳು ಎದ್ದಿದೆ.
ಅದೆಷ್ಟೋ ದೂರದಿಂದ
ನಡೆದು ಬಂದಿರುವೆ
ನಿಮಗೆ ನೀಡಲೆಂದು
ಉಡುಗೊರೆ ತಂದಿರುವೆ
ಬೆಂದು ಮುದ್ದೆಯಾದ
ನನ್ನೀ ಹಸುಗೂಸ
ತಟ್ಟೆಯಲಿಟ್ಟು ಕೊಡುವೆ
ಇಗೊಳ್ಳಿ ಇದನ್ನೇ
ಒಪ್ಪಿಸಿಕೊಳ್ಳಿ ಹೂಗುಚ್ಛದಂತೆ
ಈ ಮಾಂಸದ
ಮುದ್ದೆ -ನನ್ನಾತ್ಮದ ತುಣುಕು
ಅದರ ಹೂ-ನಗು
ಹಾರೈಸುತಿದೆ….
ದೊರೆಗೆ ಜಯವಾಗಲಿ!






0 Comments