ಸವಿತಾ ನಾಗಭೂಷಣ
————-
ಯುದ್ಧಕ್ಕೆ ಮುನ್ನ
ಒಂದಿಷ್ಟು ಮಂದಿ ಕ್ರೋಧಿತರು
ಒಂದಿಷ್ಟು ಮಂದಿ ಬೆಂಬಲಿಗರು,
ಮಿಕ್ಕವರು ಬಾಧಿತರು

ಯುದ್ಧದ ನಂತರ
ಉಳಿದವರಿಲ್ಲ
ಕಳಕೊಂಡವರೆ ಎಲ್ಲಾ…
ಎಲ್ಲೆಲ್ಲೂ ವಿರೋಧ, ಕ್ರೋಧ
ಹಾಲುಗಲ್ಲವೂ ಸನ್ನದ್ಧ ಯೋಧ !
ಸವಿತಾ ನಾಗಭೂಷಣ
————-
ಯುದ್ಧಕ್ಕೆ ಮುನ್ನ
ಒಂದಿಷ್ಟು ಮಂದಿ ಕ್ರೋಧಿತರು
ಒಂದಿಷ್ಟು ಮಂದಿ ಬೆಂಬಲಿಗರು,
ಮಿಕ್ಕವರು ಬಾಧಿತರು

ಯುದ್ಧದ ನಂತರ
ಉಳಿದವರಿಲ್ಲ
ಕಳಕೊಂಡವರೆ ಎಲ್ಲಾ…
ಎಲ್ಲೆಲ್ಲೂ ವಿರೋಧ, ಕ್ರೋಧ
ಹಾಲುಗಲ್ಲವೂ ಸನ್ನದ್ಧ ಯೋಧ !
0 Comments