ಸರೋಜಿನಿ ಪಡಸಲಗಿ
ಉರುಳುತಿದೆ ಕಾಲಚಕ್ರ
ಕಳೆಯುತಿದೆ ದಿನ ರಾತ್ರಿ
ಹೊಸ ದಿನದ ಹೊಳಹಿನಲಿ
ಚೈತ್ರ ಚಿಗುರು ನಗುತಿದೆ
ಯುಗಾದಿ ಮತ್ತೆ ಬರುತಿದೆ
ಕಳೆದ ದಿನದ ಗರ್ಭದಲಿ
ನೋವ ಗಳಿಗೆ ಮಸೆಸಿ
ನಗುವ ಹೊಸ ಬೆಳಗಿನಲಿ
ಹೊಸತು ಮುಗುಳ ಅರಳಿಸಿ
ಯುಗಾದಿ ಮತ್ತೆ ಬರುತಿದೆ
ಹೊಸತು ಕನಸು ಉದಿಸುತ
ಹೊಸ ಆಸೆಯ ಕಣ್ಣರಳಿಸಿ
ಅದೇ ಬಾನ ನೆರಳಲಿ
ಅದೇ ಭುವಿಯ ಒಡಲಲ್ಲಿ
ಯುಗಾದಿ ಮತ್ತೆ ಬರುತಿದೆ
ಪ್ರತಿ ಕ್ಷಣಕೊಂದು ನೆನಪು
ಪ್ರತಿ ನೆನಪಿಗೊಂದು ಕಥನ
ನೆನಪು ಕಥನ ಮಥಿಸಿ ಸೋಸಿ
ಸವಿ ಜೇನ ಹೊಳೆ ಹರಿಸುತ
ಹೊಸತೊಂದನಲ್ಲಿ ಬಿತ್ತುತ
ಯುಗಾದಿ ಮತ್ತೆ ಬರುತಿದೆ
0 ಪ್ರತಿಕ್ರಿಯೆಗಳು