ಕೆ ಎಂ ವಿಶ್ವನಾಥ ಮರತೂರ ಓದಿದ ‘ಒದ್ದೆಗಣ್ಣಿನ ದೀಪ’

ಕೆ ಎಂ ವಿಶ್ವನಾಥ ಮರತೂರ

ಪ್ರಸ್ತುತ ಸನ್ನಿವೇಶಗಳಿಗೆ ಮುಖಾಮುಖಿಯಾಗುವ ಚಾಂದ್‌ನ ಕವಿತೆಗಳು.

ಮಾತುಗಳು ಮೌನವಷ್ಟೇಯಲ್ಲ ಸತ್ತುಹೋದ ಕಾಲವಿದು. ಪ್ರತಿರೋಧಗಳಿಗೆ ಅವಕಾಶವೇ ಇಲ್ಲದಂತಹ ಆತಂಕದ ವಾತಾವರಣವಿದೆ. ಪ್ರಸ್ತುತ ಸಂದರ್ಭದಲ್ಲಿ ಅರಿವಿನ, ಆಚಾರಾದ ನಾಲಿಗೆ ಬರೀ ಲೌಖಿಕ ರುಚಿಯಡೆಗೆ ಸೆಳೆಯುತ್ತಿರುವ ಸಂದರ್ಭವಿದು. ಇಂತಹ ದುರಿತ ಕಾಲದಲ್ಲಿ ಪ್ರಸ್ತುತ ಸನ್ನಿವೇಶಗಳಿಗೆ ಮುಖಾಮುಖಿಯಾಗಬಲ್ಲ ಘಟ್ಟಿ ಕಾವ್ಯ ಚಾಂದ್ ರಚನೆ ಮಾಡಿದ್ದಾರೆ.

ಒದ್ದೆಗಣ್ಣಿನ ದೀಪ ಕವನ ಸಂಕಲನದ ಪ್ರತಿಯೊಂದು ಕವಿತೆಯು ಸಮಾಜದದೊಂದಿಗೆ ಸ್ಪಂದಿಸುತ್ತದೆ. ಪ್ರಸ್ತುತ ಆತಂಕದ ವಿದ್ಯಾಮಾನಗಳಿಗೆ ಎದುರಾಗುತ್ತದೆ. ಪ್ರಶ್ನೆಗಳನ್ನು ಎತ್ತುವ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಈ ಕವನ ಸಂಕಲನ ಮಾಡುತ್ತದೆ. ಕವಿತೆಗಳು ಕಾವ್ಯಾಂಜಲಿಯ ನದಿಯನ್ನು ಹರೆಸುತ್ತವೆ. ಕಾವ್ಯ ಲೋಕವನ್ನು ಇನ್ನಷ್ಟು ಶ್ರೀಮಂತದಿ೦ದ ಮೆರೆಸುವ ಶಕ್ತಿಯನ್ನು ಹೊಂದಿವೆ. ಚಾಂದ್‌ನ ಆಳವಾದ ಕನ್ನಡ ಸಾಹಿತ್ಯದ ಪರಂಪರೆಯ ಅಧ್ಯಯನದ ಸ್ಪಷ್ಟವಾದ ನೆರಳು ಕವಿತೆಗಳಲ್ಲಿದೆ. ಇಷ್ಟೇ ಅಲ್ಲದೆ ಕವಿ ತನ್ನದೇ ಆದ ಕೆಲವು ಮಹತ್ವದ ನಿಲುವುಗಳನ್ನು ಕಾವಾತ್ಮಕವಾಗಿ ಬಹಿರಂಗ ಪಡಿಸುತ್ತಾರೆ.

ಕಾವ್ಯ ತನ್ನದೇ ಆದ ವಿಶಿಷ್ಠ ಲಕ್ಷಣದ ಮೂಲಕ ಮನಸೆಳೆಯುತ್ತದೆ. ಇವುಗಳನ್ನು ಜೋರು ಧ್ವನಿಯಲ್ಲಿ ಓದಿದಾದ ಮೈನವಿರೇಳಿಸುವಷ್ಟು ಶಕ್ತಿ ಈ ಕವಿತೆಗಳಲ್ಲಿ ಅಡಗಿದೆ. ಅನುಭಗವಳನ್ನು ಓರೆಗಚ್ಚುವಷ್ಟು ಸಾಮರ್ಥ್ಯ ಈ ಕವಿತೆಗಳಲ್ಲಿ ಇಂಗಿತವಾಗಿದೆ.

ಚಾಂದ್ ಪಾಷಾ ಪ್ರಸ್ತುತ ಅನೇಕ ಯುವ ಕವಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅನೇಕ ಸಂದರ್ಭಗಳಲ್ಲಿ ಸಮಾಜದ ಏಳ್ಗೆಗಾಗಿ ಕಾವ್ಯದ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅವರ ಕಾವ್ಯ ಬದುಕು ಈ ಸಂಕಲನದ ಮೂಲಕ ಇನ್ನಷ್ಟು ಸದೃಢವಾಗುವುದರಲ್ಲಿ ಸಂದೇಹವಿಲ್ಲ.
ಕಾವ್ಯದ ಮೂಲಕ ಕಟ್ಟಿಕೊಡುವ ವಿಷಯದ ಹಿಡಿತ, ಆಳವಾದ ಅಧ್ಯಯನ, ಸಾಮಾಜಿಕ ತುಡಿತ, ಸ್ವಯಂ ಅನುಭವಗಳು ಹೆಚ್ಚಾದಲ್ಲಿ ಕಾವ್ಯ ಇನ್ನಷ್ಟು ಜನರ ಮನದೊಳಗೆ ಮನೆಮಾಡುತ್ತದೆ. ಪ್ರಸ್ತುತ ಸಮಾಜದಲ್ಲಿರುವ ಅಂತರ೦ಗ ಬಹಿರಂಗಗಳನ್ನು ಕವಿ ಆಸ್ವಾಧಿಸಬೇಕಿದೆ. ಏಕಮುಖವಾಗಿ ಚಲಿಸುವ ಚಕ್ರದಂತೆ ಕಾವ್ಯ ತನ್ನ ಪರಿಧಿಯೊಳಗೆ ಗಿರಕೀ ಹೊಡೆಯದೇ ಕುವೆಂಪು ಅವರ ವಿಶ್ವಮಾನವನಾಗಬೇಕಾದ ಅವಶ್ಯಕತೆಯಿದೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಈ ಕಾವ್ಯದ ಮೂಲಕ ಕವಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸುವೆ.


‍ಲೇಖಕರು avadhi

March 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: