ಮಡಿಕೇರಿಯಲ್ಲಿ ನಡೆಯುತ್ತಿರುವ ೮೦ ನೆಯ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಇನ್ನೆನು ತೆರೆ ಬೀಳಲಿದೆ
ನಾಳೆ ಮುಗಿಯುವ ವೇಳೆಗೆ ಸಮ್ಮೇಳನದ ನಿರ್ಣಯಗಳು ಸಹ ಮಂಡಿತವಾಗಿರುತ್ತವೆ.
ಆದರೆ ಹೀಗೆ ಸಮ್ಮೇಳನದಲ್ಲಿ ಮಂಡಿತವಾದ ನಿರ್ಣಯಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ?
ಕಳೆದ ವರ್ಷ ಬಿಜಾಪುರ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಅನುಷ್ಠಾನವಾಗಿವೆಯೇ?

ಈ ಹಿಂದಿನ ಕನ್ನಡ ಸಮ್ಮೇಳನಗಳಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗುತ್ತಿತ್ತು. ಇವುಗಳ ಅನುಷ್ಠಾನಕ್ಕೆ ಯಾವುದೇ ಕಾರ್ಯಸೂಚಿಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜಾಪುರದಲ್ಲಿ ನಡೆದ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನುಷ್ಠಾನ ಸಾಧ್ಯವಾಗಬಹುದಾದ ೯ ನಿರ್ಣಯಗಳನ್ನು ಮಾತ್ರ ಅಂಗೀಕರಿಸಲಾಯಿತು.
೧. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಮೀಸಲಾತಿ, ಸರೋಜಿನಿ ಮಹಿಷಿ ವರದಿ ಈ ಸಂದರ್ಭಕ್ಕೆ ತಕ್ಕಹಾಗೆ ಪುನರ್ ಪರಿಶೀಲನೆ
೨. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚೋದು ಬೇಡ
೩. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ
೪. ಸಮಗ್ರ ಭಾಷಾ ನೀತಿ ಜಾರಿಗೊಳಿಸಬೇಕು
೫. ಚಿತ್ರರಂಗ ಮತ್ತು ಟಿವಿಗಳಲ್ಲಿ ಡಬ್ಬಿಂಗ್ ನಿಷೇಧ
೬. ಕೃಷ್ಣಾ ಮತ್ತು ಕಾವೇರಿ ನದಿ ನೀರಿನ ಹಕ್ಕು ಉಳಿಸಿಕೊಂಡು ನೀರಾವರಿ ಯೋಜನೆ ಸಂಪೂರ್ಣಗೊಳಿಸಿ
೭. ಸಂವಿಧಾನದ ೩೭೧ (ಜೆ) ತಿದ್ದುಪಡಿಯಡಿ ೬ ಜಿಲ್ಲೆಗಳೊಂದಿಗೆ ಬಿಜಾಪುರವನ್ನೂ ಸೇರಿಸಿ
೮. ಬಿಜಾಪುರ ಬದಲು ಮೂಲ ಹೆಸರಾದ ವಿಜಾಪುರವನ್ನೇ ಅಧಿಕೃತವಾಗಿ ಬಳಸಲು ಕ್ರಮ
೯. ರಾಜ್ಯದ ಎಲ್ಲಾ ಮಹಿಳಾ ಕಾಲೇಜುಗಳನ್ನು ಬಿಜಾಪುರ ಮಹಿಳಾ ವಿವಿ ವ್ಯಾಪ್ತಿಗೆ ತರಬೇಕು
ಈ ಒಂಬತ್ತು ನಿರ್ಣಯಗಳನ್ನು ಈಗ ಗಮನಿಸಿದಾಗ ಯಾವುದೊಂದು ಸಮರ್ಪಕವಾಗಿ ಜಾರಿಯಾಗಲೇ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕನ್ನಡ ಶಾಲೆಗಳನ್ನು ಪಕ್ಕದ ಊರಿನ ಶಾಲೆಯೊಂದಿಗೆ ವಿಲೀನಗೊಳಿಸಲಾಗಿದೆ, ಆದರೆ ಹೊಸದಾಗಿ ವಿಲೀನಗೊಳಿಸದೇ ಇರುವುದು ಸಮಾಧಾನಕರ ಸಂಗತಿ. ಕನ್ನಡ ಮಾಧ್ಯಮದವರಿಗೆ ಉದ್ಯೋಗದಲ್ಲಿ ಮೀಸಲಾತಿ ಕನಸಾಗಿಯೇ ಉಳಿದಿದೆ. ಡಬ್ಬಿಂಗ್‌ನ್ನು ಸರ್ಕಾರ ಅದಿಕೃತವಾಗಿ ನಿಷೇಧಿಸಿಲ್ಲ, ಹಾಗಾಗಿ ಇದರ ತೂಗುಕತ್ತಿ ಕನ್ನಡಿಗರ ಮೇಲಿದೆ. ಸಂವಿಧಾನ ತಿದ್ದುಪಡಿಗೆ ಬಿಜಾಪುರ ಸೇರ್ಪಡೆಯಾಗಿಲ್ಲ, ವಿಜಾಪುರ ಎಂದು ಬದಲಾವಣೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಮಡಿಕೇರಿ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ ತೆಗೆದುಕೊಳ್ಳುವ ನಿರ್ಣಯ ಗಳ ಬಗ್ಗೆ ಕುತೂಹಲ ಉಂಟಾಗಿದೆ.



enu agolla