ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದ್ದಿಗಾಗಿ ಕಾತರಿಸುತ್ತೇನೆ..

ಹೆಣದ ಪಕ್ಕ ಮಲಗುವ ಯೋಗವಿನ್ನೂ ಒಲಿದಿಲ್ಲ

ವಿ.ಆರ್.ಕಾರ್ಪೆಂಟರ್

 

ರೈಲು ಬಸ್ಸಿನಲ್ಲಿ ಚಲಿಸುವಾಗ
ಹಾಗೆಯೇ ನಿದ್ರೆ ಆವರಿಸುತ್ತದೆ
ಕೊಳ್ಳುವ ವಸ್ತುಗಳು ಕಣ್ತಪ್ಪುವ
ಕಾರಣ ಸಂತೆಯೊಳು ನಿದ್ದೆ ಬರದು

ಪಕ್ಕ ಮಲಗಿದ ಜೀವದ ಉಸಿರಾಟವ
ಆಲಿಸಿ ನೆಮ್ಮದಿಯಾಗಿ ಮಲಗುವೆ;
ಹೆಣದ ಪಕ್ಕ ಮಲಗುವ ಯೋಗವಿನ್ನೂ ಒಲಿದಿಲ್ಲ

ನಾಯಿಗಳು ಬೊಗಳುವ ಸದ್ದು
ಮನುಷ್ಯರಿನ್ನೂ ಬದುಕಿರುವ ಸಾಕ್ಷ್ಯ
ಹಾಗೆ ಠಕ್ಕರ ಸುಳಿವೂ ಕೂಡ

ಹೂವು ತನ್ನ ಪಕಳೆಯುರುಳಿಸುವ
ಸದ್ದಿಗಾಗಿ ಕಾತರಿಸುತ್ತೇನೆ
ಏಕೆಂದರೆ ನಾನು ಕ್ಷುಲ್ಲಕ ಮನುಷ್ಯ
ನಿರ್ವಾತವೆಂದರೆ ಉಸಿರುಗಟ್ಟುತ್ತದೆ
ಸದಾ ಗಿಜಿಗುಡುವ ಪ್ರತಿಯೊಂದು
ಕ್ಷಣ-ಕಣವೂ ನನಗಾಪ್ತ

ಇನ್ನು ನನ್ನ ಸಹಮಾನವನ ಆರ್ತನಾದವೋ,
ಅಜಾನ್, ಪ್ರಾರ್ಥನಾ ಪ್ರಯೋಗಗಳನ್ನೋ
ಬೇಡವೆನ್ನುವಷ್ಟು ನಿರ್ವಾಣದಲ್ಲಿ ಬದುಕುವ
ಕಲೆಯಿನ್ನೂ ಸಿದ್ಧಿಸಿಲ್ಲ
ಅಥವಾ
ನಾನದಕ್ಕೆ ಒಗ್ಗಿಹೋಗಿರಬಹುದು

‍ಲೇಖಕರು admin

20 April, 2017

3 Comments

  1. ಆರನಕಟ್ಟೆ ರಂಗನಾಥ

    ಸಂತೆಯೊಳಗೆ ಸಂತತ್ವದ ಸುಳಿವಿರಬಹುದೆ ? ಧ್ಯಾನ ಪ್ರಾರ್ಥನೆ ಬಹಿರಂಗವಾಗಲೆ ಬೇಕೆ.ಭಾವುಕತೆಯಲ್ಲಿ ವಾಸ್ತವದ ಅರಿವು ಜಾರಬಾರದಲ್ಲವೆ. ಕವಿತೆ ವಾಸ್ತವದ ಚೂರು ,ಒಡೆದ ಬಿಂಬದ ಅಳಲು. ನಿರ್ವಾತವೆಂದರೆ ಉಸಿರುಗಟ್ಟುತ್ತದೆ ಈ ಸಾಲು ಹಿಡಿಯಾಗಿ ಕವಿತೆನ್ನು ದ್ವನಿಸುತ್ತದೆ. ಧನ್ಯವಾದಗಳು

    • ವಿ.ಆರ್.ಕಾರ್ಪೆಂಟರ್

      ಧನ್ಯವಾದಗಳು ಗೆಳೆಯ

  2. Kaligananath Gudadur

    ಹಳಹಳಿಸುವ ಮನದ ನೈಜ ಭಾವ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading