ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕವಿತೆ- ಮುಖಗಳ ಅಸಲಿಯತ್ತು..

ಸದಾಶಿವ್ ಸೊರಟೂರು

ದೇವದತ್ತ,
ಕಪಿಲ,

ಪದ್ಮನಿ..

ದೇವದತ್ತನ ಕಾವ್ಯದ ಇಂಪು
ಕಪಿಲನ‌ ದೇಹದ ನರಗಂಪು
ಪದ್ಮನಿಗೆ ಪ್ರಾಣ..

ದೇವದತ್ತ ಗಂಡ
ಕಪಿಲ ಗಂಡನ ಗೆಳೆಯ
ಇಷ್ಟೆ!

ತುಂಡಾದದ್ದು ಇಬ್ಬರ ರುಂಡಗಳು
ಜೋಡಿಸಿ ಜೀವ ಪಡೆದದ್ದು
ಮಾತ್ರ
ಅವನದು ಇವನಿಗೆ
ಇವನದು ಅವನಿಗೆ

ಕಪಿಲ, ದೇವದತ್ತ
ದೇವದತ್ತ, ಕಪಿಲ

ಪದ್ಮಿನಿ ಆರಿಸಿಕೊಂಡಿದ್ದು ಮಾತ್ರ
ಕಪಿಲನ ದೇಹದ
ದೇವದತ್ತನನ್ನೆ!

ಬಯಸಿದ್ದು ಹಾಲು ಅನ್ನ
ಪಡೆದದ್ದು ಹಾಲು ಅನ್ನ

ಈಗ ತಲೆ ಕತ್ತರಿಸಿ
ಜೋಡಿಸುವ ತಾಪತ್ರಯವೇ
ಇಲ್ಲ;
ಮುಖವಾಡಗಳಿವೆ.
ಅವು ಮೂಲ
ಮುಖಕ್ಕೆ ಬಾರಿಸುವಷ್ಟು
ಚೆಂದ..

ತೊಡುವುದು ಸಲಭ
ಕಳಚುವುದು ಇನ್ನೂ ಸುಲಭ
ತೊಟ್ಟು-ಕಳಚುವುದು
ಎರಡು ಕ್ಷಣದ ಮಾತು

ಮತ್ತೀಗ ಎಲ್ಲಾ ಬಲು ಸಲೀಸು
ಮುಖವಾಡ ತೊಟ್ಟು ನಡೆದರೆ!

ಅಸಲಿಗೆ
ನಮ್ಮ ಮುಖವಾದರೂ
ಯಾವುದು?
ಮತ್ತು ನಿಮ್ಮದು?

ನೆನಪಿದೆಯಾ?

‍ಲೇಖಕರು Admin

1 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading