ಸದಾಶಿವ್ ಸೊರಟೂರು ಕವಿತೆ- ಬೆರಳತುದಿಯಲ್ಲೊಂದು ಶಬ್ದ ಕಾದಿದೆ..

ಸದಾಶಿವ್ ಸೊರಟೂರು

ಇಲ್ಲೊಂದಿಷ್ಟು ಸಂಬಂಧಗಳು
ತಣ್ಣನೆಯ ತುರ್ತು ನಿಗಾ ಘಟಕದಲ್ಲಿ
ಕೈ ಕಾಲು ಎಳೆಯದೆ ಸುಮ್ಮನೆ ಮಲಗಿವೆ..
ಮಾನಿಟರ್ ನಲ್ಲಿ ಬಂಧದ ಗೆರೆಗಳು
ಒಮ್ಮೊಮ್ಮೆ ನೇರ ಮಗದೊಮ್ಮೆ ಅಡ್ಡಾದಿಡ್ಡಿ..

ಪ್ರೀತಿ ಸ್ನೇಹ ಸಂಬಂಧ
ಬಾಂಧವ್ಯ ಇಂತವೇ ಹಾಳುಮೂಳು ಚಿಕಿತ್ಸೆಗಳನ್ನು
ಒಂದರ ನಂತರ
ಒಂದು ಕೊಡುತ್ತಲೆ‌‌ ಇದ್ದಾರೆ
ಮೂಗಿಗೆ ಕಟ್ಟಿ, ಸೂಜಿಯಲಿ ಚುಚ್ಚಿ
ಗಂಟಲಿನಲ್ಲಿ ಇಟ್ಟು ನೀರು ಕುಡಿಸಿ..

ಸಾಲುವುದಿಲ್ಲ ಇವು
ಲವ್ ಯೂ
ಮಿಸ್ ಯೂ
ಹಗ್ ಯೂ
ಹೌ ಅರ್ ಯೂ..
ಗಂಟೆಗೊಂದರಂತೆ ನೀಡುತ್ತಲೇ ಇದ್ದಾರೆ..

ವೈದ್ಯರು ಕಾಯಿಲೆಯ ಹಳೆ ಕಡತ
ಬಿಚ್ಚಿ ಬಿಚ್ಚಿ ನೋಡುತ್ತಾರೆ
ಹ್ಯಾಪಿ ಬರ್ತ್ ಡೇ
ಹ್ಯಾಪಿ ಆನಿವರ್ಸರಿ
ಬೆಸ್ಟ್ ಆಫ್ ಲಕ್ ಗಳು
ಮದುವೆ ಮುಂಜಿ
ಪಾರ್ಟಿ ಗೃಹಪ್ರವೇಶ ಔಟಿಂಗ್
ಊಹೂಂ
ಏನೂ ಮದ್ದು ಮಾಡಿಲ್ಲ ಈ ಹಾಳು
ಖಾಯಿಲೆಯ ಮೇಲೆ..

ನಿಗಾ ಘಟಕದ ಹೊರಗೆ
ನಿಂತವರು ಒತ್ತುವ ಎಮೊಜಿ
ಕಮೆಂಟು, ಶೇರಿಂಗನವರು
ಆ್ಯಪ್ ಬಳಸಿ
ತಮ್ಮದೇ ಮುಖವನ್ನು ಡೂಪ್
ಮಾಡಿಕೊಂಡು
ಮಮ್ಮಲ ಮರುಗುವವರು..

ಎಲ್ಲರ ಬೆರಳು ತುದಿಯಲ್ಲೊಂದು
ಶಬ್ದವೊಂದು ಸದಾ ಸಿದ್ದವಿದೆ
ಇಂಗ್ಲಿಷ್‍ನವರ RIP
ಕನ್ನಡದವರ ಓಂ ಶಾಂತಿ..

ಇನ್ನೂ ಮಿಕ್ಕಿದರೆ
ವಿಮಾ ಪಾಲಿಸಿ
ವಿಲ್ ಪತ್ರಗಳು
ಮತ್ತು
ಚೂರೇ ಚೂರೆ ಎಂಜಲು ತುಟಿಗೆ ತಂದುಕೊಂಡು
ಚ್ಚುಚ್ಚು
ಎನ್ನುವ ಲಯಬದ್ಧ ನಾದ ಮತ್ತು ಒಂದರೆಡು ಮಾತು
ಒಳ್ಳೆಯ ಮನುಷ್ಯ
ಸಣ್ಣ ಮಕ್ಳು ಬಿಟ್ಟು ಹೊರಟೆ ಹೋದ..

ಮತ್ತೀಲ್ಲಿ ಎಲ್ಲವೂ ಸುಲಭ
ಡಿಪಿ
ಚೆಂಜ್ ಮಾಡಿದಷ್ಟು
ಡಿಲೀಟ್ ಬಟನ್ ಒತ್ತಿದಷ್ಟು!

‍ಲೇಖಕರು Admin

October 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: