ಸತ್ಯಮಂಗಲ ಮಹಾದೇವ
ನೀನು ಜಗದ ಬೆಳಕು
ಬೆಳಕು ಎಲ್ಲರೊಳಗೂ ಇದೆ ಎಲ್ಲರೂ ಬೆಳಕು
ನೀನು ಸಂಸಾರ ತೊರೆದ ಸಂನ್ಯಾಸಿ
ಸಾರವಿಲ್ಲದ ಯಾವುದರಲ್ಲೂ ನ್ಯಾಸವಿಲ್ಲ
ಎಲ್ಲವೂ ಬಂಧನ ಎಲ್ಲವೂ ಸ್ವಾತಂತ್ರ್ಯ
ನೀನು ಜಗದ ಶಾಂತಿ
ಶಾಂತಿ ನೆಲದ ತಾಯ್ತನ ಎಲ್ಲರೂ
ನೆಲದ ಸಂಪರ್ಕದಲ್ಲಿದ್ದರೆ ಸಾಕು

ನೀನು ಭಗವಂತ
ದೈವತ್ವ ಎಲ್ಲರ ಭಾವದಲ್ಲಿ ಮೊಗ್ಗಾಗಿ
ಅಡಗಿದೆ ಎಲ್ಲರಲ್ಲೂ ಅರಳಬೇಕಿದೆ
ನೀನು ಕರುಣೆಯ ಕಡಲು
ಮಾತು ಮತ್ತು ಮೌನದಲ್ಲಿರುವ
ಕರುಣೆಯನ್ನು ಹೃದಯದಲ್ಲಿ ನೆಲೆಗೊಳಿಸಬೇಕು
ನೀನು ಬುದ್ಧ
ಸ್ಥಿತ ಪ್ರಜ್ಞೆ ಎಲ್ಲರೊಳಗೂ ಇರುವ
ಮಗುತನ ಅಲ್ಲಿ ಬುದ್ಧ ಎಚ್ಚರವಾಗುತ್ತಾನೆ






0 Comments