ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟ

ಸುಧಾ ಹಡಿನಬಾಳ

ಕಲಿಯುಗದ ಕಲ್ಕಿ

ಸತ್ಯಕ್ಕೆ ಸಾಕ್ಷಿ ಕೇಳುವ ಸಂಕಟ
ಕಾಲದಲ್ಲಿ ಎಲ್ಲಿ ಅಡಗಿರುವೆ?
ಕಲಿಯುಗದ ಕಲ್ಕಿ?

ಸತ್ಯದ ಬಾಯಿ ಹೊಲಿದು
ನಿಷ್ಠೆಯ ಕೊರಳು ಬಿಗಿದು
ಹಾಡು ಹಕ್ಕಿಗೆ ಬೀಗ ಜಡಿದು
ದುಷ್ಟರು ದೀವಟಿಗೆ ಹಿಡಿದು
ಮೆರೆವ ದುರ್ಧರ ಕಾಲದಲಿ

ದುರುಳರ ಸಂಹಾರಕೆ ಬರಲಾರೆ
ಏಕೆ ನೀ ಕಲಿಯುಗದ ಕಲ್ಕಿ??
ನಿನ್ನ ನಂಬಿಹ ಜನಕೆ ನೆಮ್ಮದಿಯ
ಕರುಣಿಸಲಾರೆ ಏಕೆ ಹೇಳು ಕಲ್ಕಿ??

ಸಂಚು ಮಾಡಿ ಹೊಂಚು ಹಾಕಿ
ಮುಗುದ ಬಾಲೆಯರ ಮೇಲೆ
ಪೌರುಷದ ಅಟ್ಟಹಾಸ ಮೆರೆವ
ಕಾಮಾಂಧರ ಕಟ್ಟಿ ಕೆಡುಹಲು
ಬರಬಾರದೇಕೆ ದ್ವಾಪರದ ಕೃಷ್ಣನಾಗಿ

ಜಾತಿಯ ಘಮಲಿನಿಂದ
ಧರ್ಮದ ಅಮಲಿನಿಂದ
ಅಮಾಯಕರ ಬಲಿಪಶು
ಮಾಡಿ ಚಂದ ನೋಡುವ
ಧರ್ಮಾಂಧರ ಹುಟ್ಟಡಗಿಸಲು
ನೀ ಬಾರೆಯೇಕೆ ಬಾಬಾ ಸಾಹೇಬನಾಗಿ

ಅಧಿಕಾರ ದರ್ಪ ಎಲ್ಲೆ ಮೀರಿ
ಮುಗುದರ ಮಾರಣಹೋಮ
ಗೈವ ಮುದಿಗೂಬೆಗಳ ಸಂಹಾರಕೆ
ಬಾರದಿಹೆ ನೀನೇಕೆ ಬುದ್ಧ ಗಾಂಧಿಯ
ಅವತಾರದಿ ಮತ್ತೊಮ್ಮೆ ಕಲ್ಕಿ

ನಂಬಿಕೆಯ ಮುಖವಾಡ ತೊಟ್ಟು
ಕತ್ತಲೆಯಲ್ಲಿ ಬೆನ್ನಿಗೆ ಚೂರಿ
ಇರಿವ ಭಯೋತ್ಪಾದಕರ
ಸಮಯ ಸಾಧಕರ ನಿರ್ವಂಶಕೆ
ಬಾರಯ್ಯ ಬಾ
ಕಲಿಯುಗದ ಕಲ್ಕಿ??

ಇತಿಹಾಸ ಮತ್ತೆ ಮತ್ತೆ
ಮರುಕಳಿಸಲೇಕೆ? ರಕ್ತದ
ಕಲೆಯಲ್ಲಿ ದಾಖಲಾಗಬೇಕೆ?
ಚರಿತ್ರೆಯ ಪುಟಗಳಲ್ಲಿ
ಸಾಮರಸ್ಯದ ಹೂ ಅರಳಿಸಲು
ಎದ್ದು ಬಾ ಮೈ ಕೊಡವಿ ಬಾ
ಕಲಿಯುಗದ ಕಲ್ಕಿ!

‍ಲೇಖಕರು Admin

8 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading