ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತೀಶ ಕುಲಕರ್ಣಿ ಒಂದು ಸಾಲಿನ ಕವಿತೆಗಳು…

ಸತೀಶ ಕುಲಕರ್ಣಿ


ಹತ್ತೂರು ತಿರುಗಿದರೂ ; ಅದೇ ಕನ್ನಡಿ-ಅದೇ ಮುಖ


ಸಾವಿರ ಪತ್ರ ಕೊಡುವ ಮೋಸ್ಟಮನ್ನನ ಮನೆ, ನೀವು ಕಂಡಿರಾ, ನೀವು ಕಂಡಿರಾ ?


ನಾನು ಬಹಳ ದೊಡ್ಡವನಿದ್ದೆ ; ನಿನ್ನ ಮೈ ಮುಟ್ಟಿ ಸಣ್ಣವನಾದೆ !


ಸುಳ್ಳಿನಂಗಡಿಯಲ್ಲಿ ; ಸತ್ಯ ಮಾರಾಟಕ್ಕಿದೆ ಕೊಳ್ಳುವಿರೇನಣ್ಣಾ ?


ಬೆಂಕಿ ಆರಿಲ್ಲ, ಬೂದಿ ಹಾರಿಲ್ಲ ತುಸು ದೂರದಲ್ಲಿ ಚಿಗಿಯುತಿದೆ ಕರಕಿ.


ಅರಿವಿನಾ ದಾರಿಗೂ, ಮರೆವಿನ ದಾರಿಗೂ ಅದೆಷ್ಟು ಅಂತರ ?


ನಾನು ಉಂಡುಗುಳಿದ ನೀರುಂಡು, ಅಂಗಳದಲ್ಲಿ ಹೂವರಳಿಸಿದೆ ಕಂಟೆ ನೋಡಾ !


ಕಸ ಕಡ್ಡಿಲೇ ಕವಿತೆ ಕಟ್ಟುವ ಕಲೆ ಕಲಿಸಿದೆ ಗುಬ್ಬಿ


ಸಣ್ಣ ಜೈಲಿಂದ, ದೊಡ್ಡ ಜೈಲಿಗೆ – ಈ ಮತಾಂತರ

೧೦
ಕತ್ತಲೆಯ ಮನೆಗೆ ಕಳಸಿ, ಬಂತು ಬೆಳಗು

೧೧
ಸತ್ಯಕ್ಕೆ ಸುರಂಗ ತೋಡುತಿದೆ, ಸುಳ್ಳಿನಾ ಸಿಡಿ ಮದ್ದುಗಳು

‍ಲೇಖಕರು Admin

3 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading