ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಣ್ಣ ಸಾವು; ಮತ್ತೆ ಹುಟ್ಟಿಬರುವವರೆಗೆ..

ಎಸ್ ಸಿ ದಿನೇಶ್ ಕುಮಾರ್

  ಬಾಯಾರಿದ್ದೀಯ ಇಕೋ ನೀರು ಕುಡಿ, ಗಟಗಟನೆ ಕುಡಿಯುವಷ್ಟು ಹೊತ್ತು ಉಸಿರಾಟ ಸಾಧ್ಯವಿಲ್ಲ ಈಗ ಘಟ್ಟಿಯಾಗಿ ಉಸಿರು ಎಳೆದುಕೋ ಎಳಕೊಂಡಷ್ಟೇ ವೇಗವಾಗಿ ಉಸಿರು ಹೊರಗೆ ಬರುತ್ತದೆ ಒಳಗೆ ಹೆಚ್ಚು ಗಾಳಿ ಹಿಡಿದಿಡುವಷ್ಟು ತಾವಿಲ್ಲ   ಮೊದಲು ವೇಷ ಕಳಚಿಟ್ಟುಬಿಡು ಹೆಣ್ಣಾಗಿದ್ದರೆ ಹೆಣ್ಣಿನ ವೇಷ, ಗಂಡಾಗಿದ್ದರೆ ಗಂಡಿನ ವೇಷ ವೇಷಕ್ಕೆ ನಂಜು ತಗುಲಿ ಸಹಸ್ರಮಾನಗಳಾದವು   ಈಗ ಕುಳಿತುಕೋ ನೆಮ್ಮದಿಯಾಗಿ ನಿನಗೆ ಹೇಗೆ ಆರಾಮವೋ ಹಾಗೆ ರಕ್ತ ನಿನ್ನ ಪಾದಕ್ಕೆ ಹರಿಯುತ್ತಿರಬೇಕು, ಅಷ್ಟೆ ಪಾದ ಅಂದರೆ ಚಲನೆ ಅದು ಜಡಗೊಳ್ಳಬಾರದು   ಈಗ ಮಾತಾಡು ಮನಸ್ಸಿಗೆ ಬಂದಿದ್ದೆಲ್ಲ ಮಾತಾಡು, ಹಗುರಾಗು ನಿಜ, ಮಾತು ಕಷ್ಟ ಈ ಹೊತ್ತಲ್ಲಿ ಹೊಲೆದಿಟ್ಟಿದ್ದ ತುಟಿಗಳಿಗೆ ಈಗಷ್ಟೇ ಬಿಡುಗಡೆ ಹೊಲಿಗೆ ಬಿಚ್ಚಿದ್ದರೂ ನೋವು ಜೀವಂತ ಸತ್ತುಬಿದ್ದಿದ್ದ ನಾಲಿಗೆಗೆ ಒಂದಷ್ಟು ವ್ಯಾಯಾಮಬೇಕು ಹೊರಳಾಡಿ ಉರುಳಾಡಿ ಮಾತಿಗೆ ಸಜ್ಜಾಗಬೇಕು ಆದರೂ ಮಾತನಾಡು, ಪಿಸುಧ್ವನಿಯಲ್ಲಾದರೂ…   ಏನು? ನಿದ್ದೆ ಎಂದೆಯಾ? ಹಾಗಿದ್ದರೆ ಮಲಗು, ಇಕೋ ನನ್ನ ಮಡಿಲು ಈ ಕೈಗಳನ್ನು ಘಟ್ಟಿಯಾಗಿ ಹಿಡಿದುಕೋ ಕೆಟ್ಟ ಕನಸುಗಳು ಬಾರದಿರಲಿ   ಏನನ್ನೂ ಲೆಕ್ಕವಿಡದೆ ಎಲ್ಲ ಕೊಟ್ಟಿದ್ದೇನೆ ನಿನ್ನ ಹೆಗಲ ಮೇಲಿನ ಜೋಳಿಗೆ ಎಂದೂ ಖಾಲಿಯಾಗಕೂಡದು ಪ್ರೀತಿ ಅಕ್ಷಯವಾಗುತ್ತದೆ ಪ್ರತಿ ಹುಣ್ಣಿಮೆಗೆ   ನಿನಗೀಗ ಜೋರು ನಿದ್ದೆ ಶುದ್ಧೋದನ ಎದ್ದು ನಿಲ್ಲುವ ವೇಳೆ ಬುದ್ಧನಾಗಲು ಈ ಘಳಿಗೆಗೇ ತವಕ   ನಾನು ಕಿಂಚಿತ್ತೂ ಅಲುಗಾಡಲಾರೆ ಒಂದು ಸಣ್ಣ ಮಿಡುಕಾಟಕ್ಕೆ ನಿನ್ನ ನಿದ್ದೆ ಹಾರಿಹೋಗುತ್ತದೆ ಎಂತಲೇ ಈಗ ಸ್ಥಬ್ಧನಾಗುತ್ತೇನೆ ಸಣ್ಣ ಸಾವು; ಮತ್ತೆ ಹುಟ್ಟಿಬರುವವರೆಗೆ  
]]>

‍ಲೇಖಕರು G

17 August, 2012

2 Comments

  1. mmshaik

    uttama kavana…keep going

    • Poornima Dutt

      This is is amaaaaaaaaaazing!!! Bhavapoornavaagide Dinesh…come on Keep up the fabulous work…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading