ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ …’ – ವೈಶಾಲಿ ಹೆಗಡೆ

– ವೈಶಾಲಿ ಹೆಗಡೆ

ಮೊನ್ನೆ ಬುದ್ಧ ಪೂರ್ಣಿಮೆ. ಬುದ್ಧ ಎದ್ದ, ಉದ್ದುದ್ದ ನಡೆದ. ಆದರೂ ಬುದ್ಧ ನೆನಪಾದಾಗೆಲ್ಲ ಜೊತೆಯಲ್ಲೇ ಕಂಡುಬರುತ್ತಾಳೆ ನನಗೆ ಯಶೋಧರೆ.
ಹಿಂದಿಯ ಪ್ರಖ್ಯಾತ ಕವಿ, ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತರ ಕವಿತೆ ಯಶೋಧರಾ ಕುರಿತಾದ “ಸಖೀ ವೆ ಮುಜಸೇ ಕಹಕರ್ ಜಾತೆ ” ನನ್ನ ಸಾರ್ವಕಾಲಿಕ ಪ್ರಿಯ ಕವಿತೆಗಳಲ್ಲೊಂದು. ಆ ಯಶೋಧರೆಯ ಚಿತ್ರ ಬುದ್ಧನ ಚಿತ್ರದ ಜೊತೆಯಲ್ಲಿ ಮೂಡಿಬರುವ , ಸದಾ ಕಾಡುವ ಚಿತ್ರಣ ನನಗೆ.
ಕೊನೆಗೂ ಈ ಕವಿತೆಯನ್ನು ಅನುವಾದಿಸುವ ಸಾಹಸಕ್ಕೆ ಕೈಹಾಕಿರುವೆ. ಮೂಲಕವಿತೆಯ ಭಾವಕ್ಕೆ ಅಣುವಿನಷ್ಟಾದರೂ ನ್ಯಾಯ ಓದಗಿಸಿದ್ದಲ್ಲಿ ಸಾರ್ಥಕವಾಯಿತು ಈ ಪ್ರಯತ್ನ.

सखि, वे मुझसे कहकर जाते,
ಸಖೀ ಅವರೊಂದು ಮಾತು ಹೇಳಿಹೊಗಬಹುದಿತ್ತ
ಹೇಳಿದ್ದರ, ನಾನೊಂದು ಬೇಡಿ ಅನಿಸತಿತ್ತ?
 
ನಾನೆಂದರ ಅವರಿಗೆ ಎಂತ ಹಚ್ಚಿಕಿ
ಆದರೂನ ತಿಳಿದಿದ್ದರೇನ ನನ್ನ ಪೂರ್ತಿ?
ಬರುತಿತ್ತಲ್ಲೇ ಸದಾ ನನ್ನ ಧ್ಯಾಸಕ
ಅವರ ಮನದ ಮೊಳಕಿ
ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ |
 
ಖುದ್ದು ಚಣದೊಳಗ ಅನುಗೊಳಿಸಿ
ಇನಿಯನ, ಜೀವವಾ ಪಗಡಿಕಾಯಾಗಿಸಿ
ಯುದ್ಧ ಭೂಮಿಗಿ ನಾವೇ ಕಳಿಸಿ-
ಕೊಟ್ಟಿಲ್ಲವೇನೆ ಕ್ಷಾತ್ರಧರ್ಮವ ಹೆಸರಿಸಿ
ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ |
 
ಹಣೆಯಾಗ ಬರಿದಿದ್ದಿಲ್ಲ ಬಿಡು ಇಂಥದೊಂದು ಭಾಗ್ಯ
ಸುಳ್ಳ, ಕೊಚ್ಚಿಕೊಂಡರೇನು ಬಂತೀಗ ?
ಒಪ್ಪಿಕೊಂಡಾವರು ತ್ಯಜಿಸಿ ಹೊಂಟಾತು;
ನೆಪ್ಪಿನಾಗಷ್ಟೇ ಗಟ್ಟಿ ಕುಂತಾರು !
ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ |
 
ನಿಷ್ಥೂರ ಕಣ್ಣು ಅವರವು ಅಂತಾರ,
ಎಲ್ಲಾರ ಕಣ್ಣಾಗೂ ಹೊಳೀ ಹರೀತಾವ
ಮಿದುಎದಿಯವ್ವ ಅವರದ್ದು ಹೆಂಗ ಸಹಿಸೀತು?
ಕಾಡಿ ಮಿಡುಕಾಡಿ ಎಬ್ಬಿಸತಿತ್ತು !
ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ |
 
ಹೊಂಟಾರು ಹೋಗಲಿ, ಬಯಸಿದ್ದ ಸಿದ್ಧಿ ಸುಖ ಸಿಗಲಿ
ಜನಗೋಳ ಗೋಳ ನೋಡಿ ದುಃಖ ಬರದಿರಲಿ
ಕುಹಕವಾಡಲೇ ಹ್ಯಾಂಗ ನಾ ಯಾವ ಬಾಯಲ್ಲಿ ?
ಉಕ್ಕುಕ್ಕಿ ಬರುತದ ಇಂದು ಹೆಚ್ಚಿಗಿ ಪ್ರೀತಿ !
ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ |
 
ಹೋದಾವರೊಮ್ಮಿ ಹೊಳ್ಳಿ ಬಂದರೂ
ಏನೋ ಅಪರೂಪದ ಅನುಭವ ತಂದಾರು
ಅತ್ತತ್ತು ಹೊಳೆಯಾದ ಜೀವ ಕಂಡಾರು
ಹೆಂಗಿರಲೇ ನಾ ಹಾಡುತ್ತ ಹಾಡುತ್ತ?
ಸಖೀ ಹೋಗಬಹುದಿತ್ತ ಅವರೊಂದು ಮಾತು ಹೇಳಿ |

‍ಲೇಖಕರು G

7 May, 2015

8 Comments

  1. anonymous

    Vaishali This Is My All time Favourite Too.

  2. smitha Amrithraj

    Chennagide

  3. mmshaik

    tumba chennaagide..

  4. Anil Talikoti

    ಚೆನ್ನಾಗಿದೆ.

  5. Anonymous

    Vishali nice one hennu janmstha tyagamayi ennuvadu aksharashaha satya isnt it?

  6. vidyashankar

    Thumbs up to translation!

  7. Rohini Satya

    Kavana chennaagide. Kannadakke aapyaayamaanavaada anuvaada.

  8. ಉದಯಕುಮಾರ ಹಬ್ಬು

    ಅನುವಾದ ಚೆನ್ನಾಗಿದೆ. ಬುದ್ಧ ಹೇಳಿ ಹೋಗಿದ್ದರೆ ಇದು ಕವಿತೆಯ ಪ್ರಶ್ನೆ. ಹೇಳಲು ಅಲ್ಲಿ ಒಂದರೆಕ್ಷಣ ನಿಲ್ಲುತ್ತಿದ್ದರೂ ಸಿದ್ಧಾರ್ಥ ತನ್ನ ನಿರ್ಧಾರ ಬದಲಾಯಿಸುತ್ತಿದ್ದ. ಮನುಷ್ಯನ ಕಣ್ಣೀರ ವರೆಸುವ ಕೆಲಸ, ಬುದ್ಧಿಗೆ ಚಾಣ ಹಾಕಿ ಹರಿತಗೊಳಿಸುವ ಕೆಲಸ ಅಧೂರಿಯಾಗಿಬಿಡುತ್ತಿತ್ತು. ಹೀಗೊಂದು ಕಥೆ ಇದೆ. ಯಶೋಧರೆ ಕೇಳಿದಳಂತೆ: “ಈ ನಿಮ್ಮ ಧಮ್ಮವನ್ನು ಇಲ್ಲಿ ಕುಳಿತೆ ಹುಡುಕಬಹುದಿತ್ತಲ್ಲ?” ಆಗ ಬುದ್ಧ ಹೇಳಿದನಂತೆ: “ಆಗ ನನಗೆ ಇಲ್ಲಿಯೆ ಸಿಗುತ್ತದೆ ಎಂದು ಗೊತ್ತಿರಲಿಲ್ಲ.” ಹೆಣ್ಣು ಗಂಡಿನ ಸಾಧನೆಗೆ ಮುಸುಕುವ ಮಾಯೆ ಎಂದು ಅವನ ನಂಬಿಕೆಯಿರಬೇಕು. ಹಾಗಾಗಿ ಆನಂದ ಎಷ್ಟು ಹೇಳಿದರೂ ಹೆಣ್ಣಿಗೆ ದೀಕ್ಷೆ ಕೊಡಲು ಅವನು ತಯಾರಿರಲಿಲ್ಲ. ತುಂಬ ಒತ್ತಾಯ ಮಾಡಿದ ಮೇಲೆ ದೀಕ್ಷೆ ಕೊಡಲು ಒಪ್ಪಿದನಂತೆ. ಮತ್ತೆ ಹೇಳಿದ:“ಧಮ್ಮದ ಆಯಸ್ಸು ೫೦೦ ವರ್ಷಕ್ಕೆ ತಗ್ಗಿತು.”

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading