ವಾಸುದೇವ ನಾಡಿಗ್
ನೀನು ನುಡಿಸಿದ ಕೊಳಲು ನಾನು
ನೋಡು!
ಉಸಿರಿಗೆ ಅದೆಷ್ಟು ಅರ್ಥತಂದೆ
ಹೆರಳಲ್ಲಿ ಹೂವಾಗಿ ಮುಡಿದೆ
ನನ್ನ
ಕಂಪಿಗೂ ಜೀವ ತಂದೆ
ಈ ಲೋಕದ ಪುಟ್ಟ ಖುಶಿಗಳೂ
ಅಲ್ಲಿ ತಲುಪಿಸಿದವು ನನ್ನ
ಬೆಳಕನ್ನು ಸವರಿಕೊಂಡ ಕಂಗಳು
ಸಖೀ
ಅತೀತದಲಿ ಮಿಂದವು

ದಿನಬೆಳಗಾದರೆ
ಕಂಗೆಡಿಸುವ ಸಂಕಟಗಳು
ನೀನೆಂಬ ಗಮ್ಯದಲಿ
ಹಿತವಾದವು
ಸಖಿ
ನೀನಿರದ ಬಾಳ ಹೇಗೆ ಕಲ್ಪಿಸಲಿ
ತಿಳಿಸು?
ಅರ್ಥವಿರದ ಬಾಳಿನಲ್ಲಿ ನೀನು ನಿಲ್ಲಲಾರೆ
ಅಹಾ
ಎಷ್ಟೊಂದು ಶಬ್ದಗಳು
ನಿನ್ನ ಪರನಿಲ್ಲುತಿವೆ!
ಅರ್ಥಗಳು ಪರದಲ್ಲಿ
ತೆರೆದುಕೊಳ್ಳುತಿವೆ!
ಸಖೀ
ಶಬ್ದ ಪುನೀತಗೊಳ್ಳುವ ಪುಳಕ ಹೀಗೇ!






super kavite….sakhi shabda puneethagolluva pulaka heege thumba chandada saalu eshtavaythu
soooooo good..!!
kavithe pulakagolisuva pariyuu ide vasudeva…chhhendhhha padhya…
Good one sir…