ಸಂಸ ಮಾತ್ರವಲ್ಲ, ಎಲ್ಲರ ಮನಸ್ಸೂ ತುಂಬಿತ್ತು ..

ಸಂಸ ತುಂಬಿತ್ತು..!
ಹೌದು, ಸಂಸ ತುಂಬಿತ್ತು ನಿನ್ನೆ ಸಂಜೆಯ ರಂಗವಲ್ಲಿಯ ಸಂಭ್ರಮಕ್ಕೆ..
ಅವಿರತ ಆಯೋಜಿಸಿದ್ದ, ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ರಂಗಗೀತೆಗಳ ಸಂಗೀತ ಸಂಜೆ ರಂಗು ರಂಗಾಗಿ ಮೂಡಿಬಂತು.
7391_10206999568565585_5587143170773637024_n

ಈ ರಂಗವಲ್ಲಿ, ಕನ್ನಡದ ಎರಡು ಮಹಾನ್ ಚೇತನಗಳಾದ ನಟ ಶಂಕರನಾಗ್ ಮತ್ತು ಸಂಗೀತ ದಿಗ್ಗಜ ಸಿ ಅಶ್ವಥರಿಗೆ ಅವಿರತ ಅರ್ಪಿಸಿದ ರಂಗಗೀತ ನಮನ ಕೂಡ..
ರಾಮಚಂದ್ರ ಹಡಪದ ಮತ್ತು ಸ್ಪರ್ಶ ನೇತೃತ್ವದ ತಂಡ ಸುಮಧುರ ರಂಗ ಗೀತೆಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.
ಮುತ್ತುತ್ತಿದ್ದ ಛಳಿಯ ಕಡೆಗೆ ಗಮನವೇ ಬರದಂತೆ ಹಾಡುಗಳ ಮಾಯಾಲೋಕ ಅನಾವರಣಗೊಂಡಿತ್ತು. ’ನಾದಕೆ ಮಣಿಯದ ಮನವೇ ಇಲ್ಲ, ನಾದಕೆ ಒಲಿಯದ ದೇವರೇ ಇಲ್ಲ ಎನ್ನುತ್ತಾರೆ, ಅಲ್ಲಿದ್ದವರು ರಸಿಕರು, ಸಂಗೀತಕ್ಕೆ ಮಣಿದವರು, ಸೋತವರು. ’ಬಂದಾನೇನ ಎದುರು ನಿಂದಾನೇನಾ’, ’ಬರುವೆನೆಂದನಲ್ಲಾ ಬರದೆ ಹೋದನಲ್ಲ’, ’ಯಾವ ದೇಸದ ರಮಣ ಬಂದು ಏನು ಮೋಸವ ಮಾಡಿದ..’, ’ಆಕಾಶವೆಂಬೋದು ಮಾಯಾ ಮಂಟಪ’, ’ನ್ಯಾಸ್ತುಡಾ ನೆಲಬಾಲುಡಾ’ ಹಾಡುಗಳ ಅನುರಣನ ಇನ್ನೂ ಸುಮಾರು ದಿನಗಳವರೆಗೂ ಮನದಲ್ಲಿ ನಡೆದೇ ಇರುತ್ತದೆ.
ಅನಾರೋಗ್ಯದ ಕಾರಣದಿಂದ ಬರಲಾಗದಿದ್ದರೂ ಅಲ್ಲಿದ್ದ ಎಲ್ಲರ ಮನಸ್ಸಿನಲ್ಲೂ ಗೋಪಾಲವಾಜಪೇಯಿ ತಮ್ಮ ಹಾಡುಗಳ ಮೂಲಕ ನೆಲೆಗೊಂಡಿದ್ದರು.
ಕಾರ್ಯಕ್ರಮದ ಕೆಲವು ಚಿತ್ರಗಳು ’ಅವಧಿ’ ಓದುಗರಿಗಾಗಿ :
ಚಿತ್ರಗಳು : ರವಿ ಕುಲಕರ್ಣಿ, ನಂದಿನಿ ಶಿಂಧೆ








 
 
 

‍ಲೇಖಕರು Avadhi

January 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: