ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸಂತೆ, ಮುಖವಾಡ ಮತ್ತು ಮಗು’ – ಶಾಂತಿ ಅಪ್ಪಣ್ಣ ಕವಿತೆ

ಶಾಂತಿ ಕೆ ಅಪ್ಪಣ್ಣ

ಗಿಜಿಗುಡುವ ಸಂತೆಯೊಳಗೆ
ನೂರೆಂಟು ಮುಖಗಳು ..
ಬಗೆಬಗೆ ಮುಖವಾಡಗಳು ..
ಗಳಿಗೆಯಲಿ ಬದಲಾಗುವ ಬಣ್ಣಗಳು
ಗುರುತಿನ ಹಂಗಿಲ್ಲದೆ ಬೆರೆತ
ಎಷ್ಟೊಂದು ಮಂದಿ
ಬಿಕರಿಯ ತುದಿಯಲ್ಲಿ ಸಂಧಿಸುತ್ತವೆ
ನಿರೀಕ್ಷೆ ನಿರಾಸೆಗಳು ..
 
ತರಕಾರಿ ,ಮೀನು ,ಮಾಂಸ
ಬಲೂನು ,ಬೆಂಡು ,ಬತ್ತಾಸು..
ಜಗಮಗಿಸುವ ಫ್ಯಾನ್ಸಿ ಸ್ಟೋರು
ನಡುವೆ ಡಿಸ್ಕೌಂಟಿನ ಆಫರು ..
 
ಹಳೇ ಮಾಲಿನ ಹರಾಜಿನಂಗಡಿ
ಬಡವನ ಕಣ್ಣಲಿ ಕನಸಿನ ದಾಂಗುಡಿ
ಗಲ್ಲಿಯೊಳಗಿನ ಮುರುಕು ಬಾರು
ಹಗಲಿನಲ್ಲೇ ಅರಳಿಕೊಂಡ
ಸಂಜೆ ಮಲ್ಲಿಗೆಯ ಕಾರುಬಾರು
 
ಎಲ್ಲವೂ ಮಾರಾಟಕ್ಕಿದೆ .. ಇಲ್ಲಿ !
ಮಾರುತ್ತಿರುವವನಷ್ಟೇ ಅಲ್ಲ ..
ಕೊಳ್ಳಬಂದವನೂ ಮಾರಿಕೊಂಡವನೇ..
ಬದುಕಬಹುದಿಲ್ಲಿ …
ಮಾರಲು ಕಲಿತವನೂ
ಕೊಳ್ಳಲು ಅರಿತವನೂ.. !
ಸಮರ್ಥನ ಉಳಿವು ಜಗದ ನಿಯಮ .

ತೆರೆದ ಸಂತೆಯೊಳಗೆ ಏನುಂಟು ಏನಿಲ್ಲ
ಬೆವರು,ಬೇಸರ, ನಲಿವು, ನೋವು ..
ಆಸೆ ,ಮೋಸ , ನ್ಯಾಯ, ಅನ್ಯಾಯ……
ಸಂತೆಯೊಂದು ಪುಟ್ಟ ಜಗತ್ತು
ಜಗತ್ತೊಂದು ದೊಡ್ಡ ಸಂತೆ..
ಅಪ್ಪನ ಕೈ ಹಿಡಿದು ನಡೆವ
ಮಗುವಿನಲ್ಲಿ ಪ್ರಶ್ನೆಗಳ ಕಂತೆ ..
ಬಿಡುವಿಲ್ಲದ ಅಪ್ಪನಿಗೆ ಕೊನೆಯಿಲ್ಲದ ಚಿಂತೆ ..
 
ಮುಖವಾಡದ ಅಂಗಡಿಯ ಮುಂದೆ
ಕೈ ಜಗ್ಗುವ ಮಗು..
ಗದರುವ ಅಪ್ಪನಿಗದು ವೃಥಾ ಖರ್ಚು
ದಿನಕ್ಕೆಷ್ಟು ಬಾರಿ ಬದಲಿಸುತ್ತಾನೋ
ತೆಗೆದು ತಳ್ಳಿದ ಉಸಿರಿನಂತೆ ..
ಎಣಿಕೆಗೆ ದಕ್ಕದ ಲೆಕ್ಕ..
ಲೋಕವರಿಯದ ಮಗುವಿಗೆ
ಬಣ್ಣ ಬೆಡಗಿನ ಸೆಳೆತ ..
 
ಮುಖವಾಡ ಬೇಕೆಂದು ..
ಅಳುವ ಮಗುವಿಗೆ
ಮುಂದೊಮ್ಮೆ, ತಾನೂ
ಬಗೆಬಗೆ ಮುಖವಾಡ
ತೊಡುತ್ತೇನೆಂದು ಗೊತ್ತಿಲ್ಲ​..
ಸುಮ್ಮನೆ ಮುಂದೆ ಸಾಗುವ ಅಪ್ಪನಿಗೆ
ತಾನು ಮಗುವಾಗಿದ್ದಾಗ
ತನ್ನಲ್ಲಿಯೂ ಮುಖವಾಡ
ಇರಲಿಲ್ಲವೆಂಬುದೇ ನೆನಪಿಲ್ಲ !
 

‍ಲೇಖಕರು avadhi

26 April, 2014

10 Comments

  1. smitha Amrithraj

    chenda ide-smitha

  2. srinivas

    sooo nice…………. experience cant explain but ur poem explain…………

  3. Uday Itagi

    ಒಟ್ಟಾರೆ ಇಡಿ ಕವನ ಇಷ್ಟವಾಯಿತು. ಅದರಲ್ಲೂ ಈ ಸಾಲುಗಳು ತುಂಬಾ ಇಷ್ಟವಾದವು.
    “ಸಂತೆಯೊಂದು ಪುಟ್ಟ ಜಗತ್ತು
    ಜಗತ್ತೊಂದು ದೊಡ್ಡ ಸಂತೆ..
    ಅಪ್ಪನ ಕೈ ಹಿಡಿದು ನಡೆವ
    ಮಗುವಿನಲ್ಲಿ ಪ್ರಶ್ನೆಗಳ ಕಂತೆ ..
    ಬಿಡುವಿಲ್ಲದ ಅಪ್ಪನಿಗೆ ಕೊನೆಯಿಲ್ಲದ ಚಿಂತೆ ..”

  4. Anil Talikoti

    “ತಾನು ಮಗುವಾಗಿದ್ದಾಗ ತನ್ನಲ್ಲಿಯೂ ಮುಖವಾಡ ಇರಲಿಲ್ಲವೆಂಬುದೇ ನೆನಪಿಲ್ಲ”–wow great lines. Nice one
    -Anil

  5. ashwini rao.k.n.

    Wow very nice mam..

  6. sangeetha raviraj

    hiiii…
    arthagarbitha kavite eshtavaythu

  7. sachin naik

    Koneya 2du pyara adbhuta…. Shubhashayagalu..

  8. mmshaik

    so nice..hrdaya tattuva kavite..thanks

  9. shanthi k a

    ellarigoo nanna dhanyavaadagalu .nimma protsaahavirali

  10. satish javaregowda

    Hosa anubhava jagattannu terediduva vishishta bhashey vinutana kavite.keep it up shantiyavare.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading