ಪಾರಿಜಾತದ ಗಂಧ
ಜಯಶ್ರೀ ಬಿ ಕದ್ರಿ
ಅಂಗಳದಲ್ಲೊಂದು
ಪಾರಿಜಾತದ ಘಮಲು
ಮುಟ್ಟಿದರೆ ಬಾಡಿ ಹೋದೀತು
ಕನಸ ಪಕಳೆಗಳು ನಲುಗಿ ಹೋದೀತು

ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ
ಅರಳಿಸಿ ಬಿಡು ಜೀವದಲಿ
ರಾಗವನ್ನು
ಒಡಲಿನಲಿ ಚೈತನ್ಯದ
ಚಿಲುಮೆಯನ್ನು
ಸಂಜೆಗತ್ತಲಿನ ಮೌನವೇ
ತಣಿಸಿ ಬಿಡು
ಒಡಲುರಿಯ ಬೇಗೆಯನ್ನು
ಬಾನ ಕಾವಳದ
ರೌದ್ರವನ್ನು






very nice mam..
kavite chenda ide jayashree madam-smitha
good one..
ಸಂಜೆಗತ್ತಲಿನ ಮೌನವೇ
ತಣಿಸಿ ಬಿಡು
ಒಡಲುರಿಯ ಬೇಗೆಯನ್ನು
ಬಾನ ಕಾವಳದ
ರೌದ್ರವನ್ನುನಿಮ್ಮ ಕಾವ್ಯ ಮನಮುಟ್ಟುವಂತಿದೆhaagu ಮನ ಕಾಡುವಂತಿದೆ
So touching! Loved it 🙂