ಸಂಚಾರಿ ವಿಜಯ್ ತೀರಿಕೊಂಡ ಮೇಲೆ..

ಮಾನವೀಯತೆಯ ಕಿರೀಟ ಸಿಗಲಾರದು..!

ಚರಿತಾ ಮೈಸೂರು

ಸಂಚಾರಿ ವಿಜಯ್ ತೀರಿಕೊಂಡ ಮೇಲೆ, ಜಾತಿ ಕೆದಕಿ ಅವರಿಗೆ ಘೋರ ಅವಮಾನ ಮಾಡಿಬಿಟ್ರು ಅಂತ ಕೆಲವರು ಗೋಳಾಡ್ತಿದಾರೆ! ಇದು ಇಂಥವರ ಜಾತಿವಾದಿ ಮನಸ್ಥಿತಿಯ ಮತ್ತೊಂದು ಮುಖ ಅಷ್ಟೆ. ‘ದಲಿತ’ ಅಂತ ಐಡೆಂಟಿಫೈ ಆಗೋದೇ ದೊಡ್ಡ ಅವಮಾನ ಇವರ ಪ್ರಕಾರ! ಜಾತಿ ಕಾರಣಕ್ಕೆ ವಿಜಯ್ ಥರದ ಅಪ್ರತಿಮ ಕಲಾವಿದರು ಸರಿಯಾದ ಅವಕಾಶಗಳಿಲ್ಲದೆ ಮೂಲೆಗುಂಪಾದರೂ ಪರವಾಗಿಲ್ಲ, ತಾನು ದಲಿತ ಹಿನ್ನೆಲೆಯವನು/ಳು ಅಂತ ಮಾತ್ರ ಹೇಳಿಕೊಳ್ಳುವಂತಿಲ್ಲ! ಅದು ಮರ್ಯಾದೆ ಪ್ರಶ್ನೆ!

‘ಜಾತಿಗೀತಿ ಎಂತದ್ದೂ ಇಲ್ಲ, ಎಲ್ಲಾ ಚೆನ್ನಾಗೇ ಇದೆ. ಇಂಥವರು ಜಾತಿ ಬಗ್ಗೆ ಮಾತಾಡಿ ಮಾತಾಡಿ ಜಾತಿವ್ಯವಸ್ಥೆ ಗಟ್ಟಿ ಮಾಡ್ತಿದಾರೆ, ಇವರೆಲ್ಲ ಮನುಷ್ಯರಾಗೋದು ಯಾವಾಗ?’ ಅಂತೊಂದು ಪಾಪ್ಯುಲರ್ ಡೈಲಾಗ್ ಇದೆ! ಆಗಾಗ ಈ ಡೈಲಾಗ್ ಹೊಡ್ಕೊಂಡು, ತಮ್ಮ ಸೋಕಾಲ್ಡ್ ‘ಮನುಷ್ಯತ್ವ’ದ ಬೆನ್ನು ಚಪ್ಪರಿಸಿಕೊಳ್ಳುವ ಜನ ಯಾವತ್ತಾದರೂ ಜಾತಿಕಾರಣಕ್ಕೆ ಅನ್ಯಾಯ, ಅತ್ಯಾಚಾರ, ದೌರ್ಜನ್ಯ, ಅವಮಾನಕ್ಕೆ ಒಳಗಾದ ಒಬ್ಬರನ್ನಾದರೂ ಭೇಟಿಮಾಡಿ ಅವರ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುವ ಸಣ್ಣ ಪ್ರಯತ್ನವನ್ನಾದರೂ ಮಾಡಿದ್ದಾರ?! ಇಲ್ಲ. ತಮ್ಮದೇ ಫ್ಯಾಂಟಸಿಯಲ್ಲಿ ಬದುಕಿರುವ ಇವರಿಗೆ ಇದೆಲ್ಲದರ ಬಗ್ಗೆ ತಮ್ಮದೇ ಆದ ಬ್ರಹ್ಮಾಂಡ ಸಿನಿಕತನ ಮತ್ತು ಕಾಲ್ಪನಿಕ ನಿಲುವುಗಳಿವೆ!

ಇದನ್ನೇ ನಾವು ‘comfort zone’ ಅಂತೀವಿ.

ಈ comfort zone ಜೀವಿಗಳ ಪ್ರಕಾರ, ಜಾತಿ ಬಗ್ಗೆ, ಬಡತನದ ಬಗ್ಗೆ, ಜಾತಿ, ಲಿಂಗ, ಶ್ರೇಣಿ, ಧರ್ಮ, ಸಂಸ್ಕೃತಿಯ ಹೆಸರಲ್ಲಿ ಈ ನೆಲದಲ್ಲಿ ಪ್ರತೀದಿನ ಘಟಿಸುವ ದೌರ್ಜನ್ಯಗಳ ಬಗ್ಗೆ ಮಾತಾಡಬಾರದು. ಈ ಜಗತ್ತಲ್ಲಿರುವ ಸುಖ, ಸೌಂದರ್ಯ, ಸಂಪತ್ತು, ಬ್ಯೂಟಿಫುಲ್ ಆರ್ಟ್, ರೊಮ್ಯಾಂಟಿಕ್ ಪೊಯೆಟ್ರಿ, ಇತ್ಯಾದಿಗಳ ಬಗ್ಗೆ ಮಾತ್ರ ಫೋಕಸ್ ಮಾಡಬೇಕು. ‘ದರಿದ್ರ’ಗಳ ಬಗ್ಗೆ ಮಾತಾಡೋದು ನಿಲ್ಲಿಸಿಬಿಟ್ರೆ, ಅವು ತಂತಾನೇ ಮಾಯವಾಗಿಬಿಡುತ್ತೆ!

ಇಂಥ ದರಿದ್ರ ಮನಸ್ಥಿತಿಯ, unrealistic ಯೋಚನೆಗಳ comfort zone ಜೀವಿಗಳೇ, ನಿಮಗೆ ನಿಜಕ್ಕೂ ‘ಮನುಷ್ಯರು’ ಅನಿಸಿಕೊಳ್ಳುವ ಆಸೆ ಇದ್ದರೆ, ನಿಮ್ಮ ಸುಖಗಳನ್ನು ಸ್ವಲ್ಪಹೊತ್ತು ಬದಿಗಿರಿಸಿ, ಕಣ್ಮುಂದಿರುವ ಸತ್ಯಗಳನ್ನು ಅಡ್ರೆಸ್ ಮಾಡುವಷ್ಟು ಪುರುಸೊತ್ತು ಮಾಡಿಕೊಳ್ಳಿ. ‘ಜಾತಿ’ ಅನ್ನೋದು ಈ ನೆಲಕ್ಕಂಟಿರುವ hardcore reality. ಇದನ್ನು ನೇರವಾಗಿ ಅಡ್ರೆಸ್ ಮಾಡದೆ, ಇದರಿಂದ ದಾಟಿಕೊಳ್ಳುವ ದಾರಿಗಳಿಲ್ಲ. ನಿಮ್ಮೊಳಗೆ ಮತ್ತು ನಿಮ್ಮ ಜಾತಿ/ಸಮುದಾಯಗಳೊಳಗೆ ಇರುವ ಜಾತಿಗ್ರಸ್ತತೆಯ ಬಗ್ಗೆ ನೀವು ನಿಷ್ಠುರ ವಿಮರ್ಶಕರಾಗದೇ ನಿಮಗೆ ‘ಮನುಷ್ಯತ್ವದ/ಮಾನವೀಯತೆ’ಯ ಕಿರೀಟ ಸಿಗಲಾರದು!

‍ಲೇಖಕರು Admin

June 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ನಿಮ್ಮ ಲೇಖನ ಸಕಾಲಿಕವಾಗಿದೆ. ಖಡಕ್ಕಾಗಿ ಹೇಳಿದ್ದೀರ. ನೀವು ಬರೆದಿರುವ ಹಾಗೆ, ಇತ್ತೀಚೆಗೆ so called privileged ಮಾನವತಾವಾದಿಗಳು (?) ಘಟಿಸುತ್ರಿರುವ
    ಕೆಟ್ಟಸುದ್ದಿಗಳ ಮಾತಾಡಿದರೆ ಸಡನ್ನಾಗಿ disturb ಆಗಿ ಎಲ್ಲಾ ಸರಿಯಾಗಿದೆ ಎಂದು ಮೈಮೇಲೆ ಬೀಳುತ್ತಾರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: