ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಘಮಿತ್ರೆ ನಾಗರಘಟ್ಟ​​ ಹೊಸ ಕವಿತೆ – ಬೊಗಸೆಯ ಕನಸು

ಸಂಘಮಿತ್ರೆ ನಾಗರಘಟ್ಟ​​

ಎಷ್ಟು‌ ಕಾಲ
ನಿಮ್ಮನ್ನು ಹೀಗೆ-
ಬೊಗಸೆಯಲಿ
ಬಂಧಿಸಲಿ?
ನಿಮ್ಮ ರೆಕ್ಕೆಗಳು
ಉಸಿರುಕಟ್ಟಿ-
ನನ್ನ ಕೈಗಳು ಬೆವರುತ್ತಿವೆ..!
ಬಿಡುಗಡೆ ಇಬ್ಬರಿಗೂ ಬೇಕು…
ಮತ್ತೆ ಮತ್ತೆ ಹಾರಲು,
ನಿಮಗಾಗಿ ನಾನೂ
ಓಡಿ ಬರಲು….,

ಗರಿ ಬಿಚ್ಚಿ ತಲುಪಿರಿ
ಆ ನಿಮ್ಮ ಕನಸಿನ
ಹೂಗಳ ಬನಕೆ
ಬಿಡುವಿದ್ದರೆ ನನಗೂ
ಆ ಜಾಡನ್ನು ತೋರಿಸಿ
ನನಗೂ ಅದರ ತುರ್ತಿದೆ
ನಾನು ಮತ್ತೆ ಆ ಬನದಿ
ಆಡುತ,
ಮಗುವಾಗ ಬಲ್ಲೆ ಎಂದು….

‍ಲೇಖಕರು Avadhi

27 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading